ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಮಧ್ಯೆಯೇ ಕೇಂದ್ರ ಮತ್ತು ಏರ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ. ಈ ಕುರಿತು ಏರ್ ಇಂಡಿಯಾಗೆ ಆದೇಶ ನೀಡಿರುವ ಸರ್ವೋಚ್ಛ ನ್ಯಾಯಾಲಯ ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಏರ್ ಇಂಡಿಯಾ ವಿಮಾನಗಳಲ್ಲಿ ಮಧ್ಯದ ಸೀಟ್ ಖಾಲಿ ಬಿಡುವಂತೆ ಬಾಂಬೆ ಹೈ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವಂತೆ ನ್ಯಾಯಪೀಠ ಆದೇಶಿಸಿದೆ. ಆದರೆ, ಮುಂದಿನ 10 ದಿನಗಳವರೆಗೆ ವಿಮಾನದಲ್ಲಿ ಎಲ್ಲಾ ಆಸನಗಳಲ್ಲಿ ಪ್ರಯಾಣಿಕರನ್ನು ಕೂರಿಸಲು ನ್ಯಾಯಾಲಯ ಅನುಮತಿ ನೀಡಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಕೇಂದ್ರ ಸರ್ಕಾರವನ್ನೂ ಕೂಡ ತರಾಟೆಗೆ ತೆಗೆದುಕೊಂಡಿರುವ ನ್ಯಾಯಪೀಠ, ನಿಮಗೆ ಕೇವಲ ನಿಮ್ಮ ಏರ್ ಲೈನ್ಸ್ ಕಾಳಜಿ ಇದ್ದು, ಯಾತ್ರಿಗಳ ಆರೋಗ್ಯದ ಕಾಳಜಿ ನಿಮ್ಮ ಪ್ರಮುಖ ಆದ್ಯತೆ ಆಗಿರಬೇಕು. ಒಂದು ವೇಳೆ ಎಲ್ಲಾ ಆಸನಗಳಲ್ಲಿ ಯಾತ್ರಿಗಳು ಕುಳಿತರೆ ಸೋಂಕು ಪಸರಿಸುವ ಅಪಾಯ ಹೆಚ್ಚಾಗಿರುತ್ತದೆ. ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಪಟ್ಟು ಬಿಗಿಗೊಳಿಸಿರುವ ಮುಖ್ಯ ನ್ಯಾಯಮೂರ್ತಿಗಳು, ಇದೊಂದು ವಿಮಾನವಾಗಿದ್ದು, ಇದರಲ್ಲಿ ಯಾತ್ರಿಗಳಿಗೆ ಸೋಂಕು ಪಸರಿಸಬಾರದು ಎಂಬುದು ವೈರಸ್ ಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.


ಇಂದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಈದ್ ರಜೆ ಇದ್ದರೂ ಕೂಡ ಸುಪ್ರೀಂ ಕೋರ್ಟ್ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿದೆ.


ಇದಕ್ಕೂ ಮೊದಲು ವಿದೇಶಗಳಿಂದ ಬರುವ ವಿಮಾನಗಳಲ್ಲಿ ಮಧ್ಯದ ಸೀಟ್ ಅನ್ನು ಖಾಲಿ ಇರಿಸುವಂತೆ ಬಾಂಬೆ ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹಾಗೂ ಏರ್ ಇಂಡಿಯಾ ಸಂಸ್ಥೆ ಸುಪ್ರೀಂ ಮೆಟ್ಟಿಲೇರಿದ್ದವು.


ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಎಲ್ಲಾ ಆಸನಗಳ ಮಧ್ಯದ ಆಸನವನ್ನು ಖಾಲಿ ಇಡಲು ಬಾಂಬೆ ಹೈ ಕೋರ್ಟ್ ಆದೇಶ ನೀಡಿತ್ತು. ಅಷ್ಟೇ ಅಲ್ಲ ಈ ಕುರಿತು ಏರ್ ಇಂಡಿಯಾಗೆ ಸೂಚನೆ ನೀಡಿದ್ದ ನ್ಯಾಯಪೀಠ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದಂತೆ DGCA ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಲು ಹೇಳಿತ್ತು. DGCA ಮಾರ್ಗಸೂಚಿಗಳ ಅನುಸಾರ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಧ್ಯದ ಸೀಟ್ ಗಳನ್ನು ಖಾಲಿ ಇರಿಸುವುದು ಅನಿವಾರ್ಯ ಎಂದು ಹೇಳಲಾಗಿದೆ.


ಜೊತೆಗೆ ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಸೋಂಕಿನಿಂದ ರಕ್ಷಿಸಿಕೊಳ್ಳಲು ವಿಮಾನಗಳಲ್ಲಿ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಖಾತರಿಪಡಿಸಲು ಅಂತಾರಾಜ್ಯ ವಿಮಾನಗಳ ಎಲ್ಲಾ ಆಸನಗಳಲ್ಲಿ ಮಧ್ಯದ ಆಸನವನ್ನು ಖಾಲಿ ಇಡುವಂತೆ ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿತ್ತು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಅಷ್ಟೇ ಅಲ್ಲ ಈ ಸಲಹೆ ಅಂತಾರಾಷ್ಟ್ರೀಯ ವಿಮಾನಗಳಿಗೂ ಕೂಡ ಅನ್ವಯಿಸಬೇಕು. ಅಂದರೆ, ವಿದೇಶದಿಂದ ಬರುವ ನಮ್ಮ ವಿಮಾನಗಳು ತಮ್ಮ ಆಸನಗಳಿಗಿಂತ ಕಡಿಮೆ ಪ್ರಯಾಣಿಕರನ್ನು ದೇಶಕ್ಕೆ ಕರೆತರಬೇಕು ಎಂದಿತ್ತು.