ನವದೆಹಲಿ : ಲಖಿಂಪುರ್ ಖೇರಿ ಹಿಂಸಾಚಾರ (Lakhimpur Kheri Violence) ಪ್ರಕರಣದಲ್ಲಿ ನ್ಯಾಯಾಧೀಶರ ಮುಂದೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ (Supreme Court) ಬುಧವಾರ ಯುಪಿ ಸರ್ಕಾರವನ್ನು (UP Government) ತರಾಟೆಗೆ ತೆಗೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ವಿಳಂಬ ಮಾಡದಂತೆ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಾಮನ್, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ನ್ಯಾಯಪೀಠವು ಉತ್ತರ ಪ್ರದೇಶ ಸರ್ಕಾರ ಪರ ವಕೀಲರಿಗೆ, ವಿಳಂಬ  ಮಾಡುವ ಧೋರಣೆಯಿಂದ ದೂರ ಉಳಿಯುವಂತೆ ಹೇಳಿದೆ.  


COMMERCIAL BREAK
SCROLL TO CONTINUE READING

ಯುಪಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡ ನ್ಯಾಯಾಲಯ : 
ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ (Harish salve) , ಮೊಹರು ಮಾಡಿದ ಕವರ್‌ನಲ್ಲಿ ಘಟನೆಯ ವರದಿಯನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಯಾವುದೇ ರೀತಿಯ ಫೈಲಿಂಗ್‌ಗಾಗಿ ನಿನ್ನೆ ರಾತ್ರಿ 1 ಗಂಟೆಯವರೆಗೆ ಕಾಯುತ್ತಿದ್ದೆವು ಎಂದು ನ್ಯಾಯಾಲಯ ಹೇಳಿದೆ. ಆದರೆ ರಾತ್ರಿಯವರೆಗೂ ಯಾವ ವರದಿಯು ತಲುಪಿಲ್ಲ. ಮೊಹರು ಮಾಡಿದ ಲಕೋಟೆಯ ಬಗ್ಗೆ ನ್ಯಾಯಾಲಯ ಏನನ್ನೂ ಹೇಳಿಲ್ಲ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಪ್ರಕರಣದ 44 ಸಾಕ್ಷಿಗಳ ಪೈಕಿ ನಾಲ್ವರು ಸೆಕ್ಷನ್ 164 ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇದುವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಾಲ್ವೆ ಪೀಠಕ್ಕೆ ತಿಳಿಸಿದರು. 


ಇದನ್ನೂ ಓದಿ :  ಬೆಳೆ ನಷ್ಟವಾದರೆ ರೈತರಿಗೆ 50 ಸಾವಿರ ರೂ. ಪರಿಹಾರ , ಕೇಜ್ರಿವಾಲ್ ಸರ್ಕಾರದ ಘೋಷಣೆ


ಲಖಿಂಪುರ ಪ್ರಕರಣದಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದೆಯೇ? 
ಸರ್ಕಾರದ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, "ಇತರ ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ಏಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದೆ. 'ನೀವು ಕಸ್ಟಡಿಗೆ ಬೇಡಿಕೆ ಇಟ್ಟಿಲ್ಲ, ಹಾಗಾಗಿ  ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು ಪ್ರಕರಣದ ಸ್ಟೇಟಸ್ ಏನು ಎಂದು ಕೋರ್ಟ್ ಕೇಳಿದೆ.  ಇದಕ್ಕೆ ಉತ್ತರಿಸಿದ ಸಾಲ್ವೆ, ಇತರ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ, ಆದರೆ ನ್ಯಾಯಾಲಯಗಳಿಗೆ (Court) ರಜೆ ಇದೆ ಎಂದು ತಿಳಿಸಿದರು. ಆ ಸಂದರ್ಭದಲ್ಲಿ  'ದಸರಾ ರಜೆಗೆ ಕ್ರಿಮಿನಲ್ ನ್ಯಾಯಾಲಯಗಳನ್ನು ಮುಚ್ಚಲಾಗಿತ್ತೇ  ಎಂದು ಕೋರ್ಟ್ ಪ್ರಶ್ನಿಸಿದೆ. ಈ ಪ್ರಕರಣ  ಅಂತ್ಯವಿಲ್ಲದ ಕಥೆಯಾಗಬಾರದು, ಎಂದು ನಾವು ಬಯಸುತ್ತೇವೆ' ಎಂದು ಕೋರ್ಟ್ ಹೇಳಿದೆ.
 
ಇದಾದ ನಂತರ ಸಾಲ್ವೆ ಈ ವಿಷಯದಲ್ಲಿ ಸಮಯಾವಕಾಶ ಕೋರಿದರು. ವಾದಗಳನ್ನು ಆಲಿಸಿದ ನಂತರ, ಪೀಠವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ಮುಂದೂಡಿದೆ. ಲಖಿಂಪುರ್ ಖೇರಿ ಹಿಂಸಾಚಾರ (Lakhimpur Kheri Violence) ಪ್ರಕರಣದಲ್ಲಿ ಇಬ್ಬರು ವಕೀಲರ ಪತ್ರದ ಆಧಾರದ ಮೇಲೆ ಸುಪ್ರೀಂ ಕೋರ್ಟ್ (Supreme Court) ಸಿಬಿಐ ತನಿಖೆಗೆ ಬೇಡಿಕೆ ಇಟ್ಟಿದೆ. 


ಇದನ್ನೂ ಓದಿ :   Medicine For Dengue Fever: ಕೊನೆಗೂ ಸಿಕ್ಕೆ ಬಿಟ್ತು ಡೆಂಗ್ಯೂ ಜ್ವರಕ್ಕೆ ಔಷಧಿ, ದೇಶದ ಈ 20 ಸ್ಥಳಗಳಲ್ಲಿ ನಡೆಯಲಿದೆ ಟ್ರಯಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ