ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಬ್ಬರಿಗೆ ರಕ್ಷಣೆ ನೀಡಲು ಸುಪ್ರೀಂ ಆದೇಶ
ಇತ್ತಿಚಿಗಷ್ಟೇ ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಹೊಸ ಸಂಚಲನ ಮೂಡಿಸಿದ್ದ ಮಹಿಳೆಯರಿಬ್ಬರಿಗೆ ರಕ್ಷಣೆ ಒದಗಿಸಲು ಸುಪ್ರೀಂಕೋರ್ಟ್ ಕೇರಳ ಸರ್ಕಾರಕ್ಕೆ ಆದೇಶಿಸಿದೆ .
ನವದೆಹಲಿ: ಇತ್ತಿಚಿಗಷ್ಟೇ ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಹೊಸ ಸಂಚಲನ ಮೂಡಿಸಿದ್ದ ಮಹಿಳೆಯರಿಬ್ಬರಿಗೆ ರಕ್ಷಣೆ ಒದಗಿಸಲು ಸುಪ್ರೀಂಕೋರ್ಟ್ ಕೇರಳ ಸರ್ಕಾರಕ್ಕೆ ಆದೇಶಿಸಿದೆ .
ಕನಕ ದುರ್ಗಾ ಮತ್ತು ಬಿಂದು ಅಮ್ಮಿನಿ ಎನ್ನುವ ಇಬ್ಬರು ಮಹಿಳೆಯರು ಜನವರಿ 2 ರಂದು ಶಬರಿ ಮಲೆ ದೇವಸ್ಥಾನವನ್ನು ಪ್ರವೇಶಿಸಿದ್ದರು.ಅದರಲ್ಲಿ ಒಬ್ಬ ಮಹಿಳೆಗೆ ಅತ್ತಿಗೆ ಹಲ್ಲೆ ಮಾಡಿದ್ದರು ಈ ಹಿನ್ನಲೆಯಲ್ಲಿ ತಮಗೆ ರಕ್ಷಣೆ ಬೇಕೆಂದು ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.ಈಗ ಅವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅವರಿಗೆ ರೌಂಡ್ ದಿ ಕ್ಲಾಕ್ ಪೋಲಿಸ್ ರಕ್ಷಣೆ ಒದಗಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಈ ಹಿಂದೆ ಸುಪ್ರೀಂಕೋರ್ಟ್ ಲಿಂಗದ ಆಧಾರದ ಮೇಲೆ ಮಹಿಳೆಯ ಹಕ್ಕುಗಳನ್ನು ಕಡೆಗಣಿಸುವ ಹಾಗಿಲ್ಲ ಎಂದು ಮಹಿಳೆಯರಿಗೂ ಸಹಿತ ದೇವಸ್ಥಾನಕ್ಕೆ ಪ್ರವೇಶದ ಅವಕಾಶವನ್ನು ಸುಪ್ರೀಂಕೋರ್ಟ್ ಕಲ್ಪಿಸಿತ್ತು, ಆದರೆ ಇದಾದ ನಂತರ ಕೇರಳಾದ್ಯಂತ ಪ್ರತಿಭಟನೆಗಳು ಜರುಗಿದ್ದವು, ಹಲವು ಬಲಪಂಥೀಯ ಸಂಘಟನೆಗಳು ಸಹಿತ ಇದಕ್ಕೆ ಅವಕಾಶ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಮಹಿಳೆಯರು ದೇವಸ್ತಾನಕ್ಕೆ ಪ್ರವೇಶಿಸುವುದು ನಿಜಕ್ಕೂ ಜಟಿಲವಾಗಿತ್ತು. ಆದರೆ ಕೊನೆಗೂ ಈ ಇಬ್ಬರು ಮಹಿಳೆಯರು ಜನವರಿ 2 ರಂದು ದೇವಸ್ಥಾನ ಪ್ರವೇಶಿಸುವುದರ ಮೂಲಕ ಸುಪ್ರೀಂ ಆದೇಶವನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಇದಾದ ನಂತರ ಮಹಿಳೆಯರಿಬ್ಬರು ಜೀವ ಬೆದರಿಕೆಯಿಂದಾಗಿ ಬಹಿರಂಗವಾಗಿ ಎಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಮಂಗಳವಾರದಂದು ಕನಕ ದುರ್ಗ ಎನ್ನುವ ಮಹಿಳೆಗೆ ಮನೆಯಲ್ಲಿದ್ದ ಅತ್ತೆಯೇ ಹಲ್ಲೆ ಮಾಡಿದ್ದಳು. ಈಗ ಆಕೆಯ ವಿರುದ್ದ ಪ್ರಕರಣ ದಾಖಲಾಗಿದೆ.ಸಾಂಪ್ರದಾಯಿಕವಾಗಿ 10ರಿಂದ 50 ವರ್ಷದ ಮಹಿಳೆಯರು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವು ಹಾಗಿಲ್ಲ. ಆದರೆ ಈಗ ಸುಪ್ರೀಂಕೋರ್ಟ್ ಎಲ್ಲ ರೀತಿಯ ಮಹಿಳೆಯರನ್ನು ದೇವಸ್ಥಾನಕ್ಕೆ ಪ್ರವೇಶಿಸಲು ಆದೇಶ ನೀಡಿದೆ.