ನವದೆಹಲಿ: ಸಾಲ ಮರುಪಾವತಿಗೆ ಒಂದಿಲ್ಲೊಂದು ನೆಪ ಹೇಳುತ್ತಿರುವ ಮದ್ಯದ ದೊರೆ ವಿಜಯ ಮಲ್ಯಗೆ (Vijay Malya) ಈಗ ಸುಪ್ರೀಂ ಕೋರ್ಟ್ (Supream Court)ನಲ್ಲೂ ಭಾರೀ ಹಿನ್ನಡೆಯಾಗಿದೆ. 


COMMERCIAL BREAK
SCROLL TO CONTINUE READING

ಬಾಕಿ ಸಾಲ ಮರುಪಾವತಿಯಾಗದ ಹಿನ್ನಲೆಯಲ್ಲಿ ವಿಜಯ ಮಲ್ಯ ಒಡೆತನದ ಯುನೈಟೆಡ್ ಬ್ರಿವರಿಸ್ ಹೋಲ್ಡಿಂಗ್ಸ್ ಲಿಮಿಟೆಡ್ (UBHL) ಕಂಪನಿಯ ವ್ಯವಹಾರ ಸ್ಥಗಿತಗೊಳಿಸಿ ಬಾಕಿ ವಸೂಲಿ ಮಾಡುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್ ಅದೇಶಿಸಿತ್ತು.‌ ಈ ಆದೇಶವನ್ನು ಸೋಮವಾರ ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ. 


ವಿಜಯ್ ಮಲ್ಯಗೆ ಆಶ್ರಯ ನೀಡುವುದನ್ನು ಪರಿಗಣಿಸಬೇಡಿ: ಬ್ರಿಟನ್‌ಗೆ ಭಾರತದ ಮನವಿ


ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ ಲೈನ್ಸ್ ಸಾಲ ಮರು ಪಾವತಿಯಾಗದ ಹಿನ್ನಲೆಯಲ್ಲಿ ಕರ್ನಾಟಕ ಹೈಕೋರ್ಟ್ ಈ ಆದೇಶ ನೀಡಿತ್ತು. ಯುಬಿಹೆಚ್ ಎಲ್ ಕಂಪನಿಯ ವಹಿವಾಟು ಸ್ಥಗಿತಗೊಳಿಸಿ ಸಾಲ ವಸೂಲಾತಿ ಮಾಡುವಂತೆ ಆರೋಪಿ ವಿಜಯ್ ಮಲ್ಯಗೆ ಸೂಚಿಸಿತ್ತು. ಈ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶವನ್ನು ವಿಜಯ ಮಲ್ಯ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ವಿಜಯ ಮಲ್ಯ ಅರ್ಜಿಯನ್ನು ವಜಾಗೊಳಿಸಿತು.


Economic Pacageಗಾಗಿ ಅಭಿನಂದನೆ, ಆದರೆ ನನ್ನಿಂದಲೂ ಸರ್ಕಾರ ಹಣ ಪಡೆದುಕೊಳ್ಳಲಿ: ಮಲ್ಯ


ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ನ್ಯಾಯಪೀಠವು ವಿಜಯ್ ಮಲ್ಯ ಪರವಾಗಿ ಯುಬಿಹೆಚ್ ಎಲ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನಿರಾಕರಿಸಿತು. ಜೊತೆಗೆ 102 ವರ್ಷ ಹಳೆಯ ಯುಬಿಹೆಚ್ ಎಲ್ ವಹಿವಾಟು ಸ್ಥಗಿತಗೊಳಿಸಿ ಸಾಲ ವಸೂಲು ಮಾಡುವಂತೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು.


ಹಿರಿಯ ನ್ಯಾಯವಾದಿ ಮುಕುಲ್ ರೊಹಟಗಿ ಎಸ್ ಬಿಐ (SBI) ನೇತೃತ್ವದ ಬ್ಯಾಂಕುಗಳ ಒಕ್ಕೂಟದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ವಿಜಯ ಮಲ್ಯ ಮತ್ತು ಯುಬಿಹೆಚ್ ಎಲ್ ಕಂಪನಿಯಿಂದ ಈಗಾಗಲೇ 3600 ಕೋಟಿ ರೂಪಾಯಿ ಸಾಲ ವಸೂಲಾಗಿದ್ದು, 11000 ಕೋಟಿ ರೂಪಾಯಿ ಸಾಲ ಮರುಪಾವತಿ ಬಾಕಿ ಇದೆ ಎಂದು ರೊಹಟಗಿ ನ್ಯಾಯಾಲಯಕ್ಕೆ ತಿಳಿಸಿದರು.


ಜಾರಿ ನಿರ್ದೇಶನಾಲಯವು ವಿಜಯ ಮಲ್ಯಗೆ ಸೇರಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು. ಈ ಆಸ್ತಿಗಳ ಮೇಲೆ ಬ್ಯಾಂಕುಗಳಿಗೆ ಮೊದಲ ಹಕ್ಕು ಇದೆ ಎಂದು ಮುಕುಲ್ ರೊಹಟಗಿ ಹೇಳಿದರು.