ನವದೆಹಲಿ: ಸುಪ್ರೀಂಕೋರ್ಟ್ ಗುರುವಾರದಂದು ಲೋಕಪಾಲ್ ಶೋಧ ಸಮಿತಿಗೆ ಫೆಬ್ರುವರಿ ಅಂತ್ಯದ ಒಳಗೆ ಹೆಸರುಗಳನ್ನು ಸೂಚಿಸಲು ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ (ನಿವೃತ್ತ) ರಂಜನ್ ಪ್ರಕಾಶ್ ದೇಸಾಯಿ ನೇತೃತ್ವದ ಶೋಧ ಸಮಿತಿಗೆ ಮುಂಬರುವ ಫೆಬ್ರುವರಿ ಅಂತ್ಯದ ಒಳಗಾಗಿ ದೇಶದ ಓಂಬಡ್ಸ್ಮನ್ ಎಂದು ಕರೆಯಲಾಗುವ ಲೋಕಪಾಲ್ ಗೆ ಹೆಸರನ್ನು ಸೂಚಿಸಬೇಕೆಂದು ಹೇಳಿದೆ.ಅಲ್ಲದೆ ಲೋಕಪಾಲ್ ಸ್ಥಾಪನೆಗಾಗಿ ಅದಕ್ಕೆ ಸಂಬಂಧಪಟ್ಟ ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಒದಗಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. 


ಮುಖ್ಯ ನ್ಯಾಯಾಧೀಶರು ರಂಜನ್ ಗೊಗೊಯ್ ಅವರ ನೇತೃತ್ವದ ಪೀಠವು ಕೇಂದ್ರ ಸರ್ಕಾರಕ್ಕೆ ಲೋಕಪಾಲ ಸಂಸ್ಥೆಯ ಸ್ಥಾಪನೆ ವಿಚಾರವಾಗಿ ಅಗತ್ಯವಾದ ಮೂಲಭೂತ ಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸಲು ಕೇಳಿದೆ.ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಲ್. ಎನ್. ರಾವ್ ಮತ್ತು ಎಸ್. ಕೆ. ಕೌಲ್ ಕೂಡ ಇದ್ದಾರೆ.ಪೀಠ ನಿಗದಿ ಪಡಿಸಿರುವಂತೆ ಮುಂದಿನ ವಿಚಾರಣೆ ಮಾರ್ಚ್ 7 ರಂದು ನಡೆಯಲಿದೆ ಎನ್ನಲಾಗಿದೆ.


ಈ ವಿಚಾರವಾಗಿ ಸುಪ್ರೀಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಕೆ. ವೇಣುಗೋಪಾಲ್ ಮೂಲಭೂತ ಸೌಕರ್ಯ ಮತ್ತು ಮಾನವ ಸಂಪನ್ಮೂಲದಂತಹ ಕೆಲವು ಸಮಸ್ಯೆಗಳಿದ್ದವು ಆದ್ದರಿಂದ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.


ಈ ತಿಂಗಳ ಆರಂಭದಲ್ಲಿ ಲೋಕಪಾಲ್ ಶೋಧ ಸಮಿತಿಯನ್ನು ಸ್ಥಾಪಿಸಲು ಕಳೆದ ವರ್ಷ ಸೆಪ್ಟೆಂಬರ್ನಿಂದ ತೆಗೆದುಕೊಂಡ ಅಫಿಡವಿಟ್ ಕ್ರಮಗಳನ್ನು ತಿಳಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು ಎನ್ನಲಾಗಿದೆ.ಜನವರಿ 17 ರಂದು ಈ ವಿಷಯದಲ್ಲಿ ಅಫಿಡವಿಟ್ ಸಲ್ಲಿಸಲು ಸುಪ್ರೀಂಕೋರ್ಟ್ ಅಟಾರ್ನಿ ಜನರಲ್ ವೇಣುಗೋಪಾಲರಿಗೆ ಸೂಚನೆ ನೀಡಿತ್ತು.