Supreme On Court: ಕೇರಳ ಸ್ಟೋರಿ ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಚಿತ್ರದ ಪ್ರದಶನದ ಮೇಲೆ ನಿಷೇಧ ವಿಧಿಸಿದ್ದ  ಪಶ್ಚಿಮ ಬಂಗಾಳ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಚಲನಚಿತ್ರವನ್ನು ನಿಷೇಧಿಸುವ ಬಂಗಾಳ ಸರ್ಕಾರದ ಆದೇಶವು ತರ್ಕಬದ್ಧವಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಚಿತ್ರ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಥಿಯೇಟರ್‌ಗಳಲ್ಲಿ ಸಿನಿಮಾ ವೀಕ್ಷಿಸಲು ತೆರಳುವ ಜನರಿಗೆ ಭದ್ರತೆ ಒದಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 11 ರಂದು ನಡೆಯಲಿದೆ. ಚಲನಚಿತ್ರ ನಿರ್ಮಾಪಕರ ಪರವಾಗಿ ವಕೀಲ ಸಾಳ್ವೆ, ಮೇ 20 ರಂದು ಸಂಜೆ 5 ಗಂಟೆಯೊಳಗೆ, 32,000 ಜನರ ಮತಾಂತರವನ್ನು ಸಾಬೀತುಪಡಿಸಲು ಯಾವುದೇ ನಿರ್ದಿಷ್ಟ ಅಂಕಿಅಂಶಗಳಿಲ್ಲ ಮತ್ತು ಚಲನಚಿತ್ರವು ವಿಷಯದ ಕಾಲ್ಪನಿಕ ಆವೃತ್ತಿಯನ್ನು ಬಿಂಬಿಸುತ್ತದೆ  ಎಂಬ ಹಕ್ಕು ನಿರಾಕರಣೆಯನ್ನು ಚಿತ್ರಕ್ಕೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ .


'ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಕೆಲಸ'
ಚಿತ್ರದ ಪ್ರಮಾಣೀಕರಣದ ವಿರುದ್ಧ ಯಾರೂ ಯಾವುದೇ ಶಾಸನಬದ್ಧ ಮೇಲ್ಮನವಿ ಸಲ್ಲಿಸಿಲ್ಲ ಎಂದು ನಿರ್ಮಾಪಕರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಕೆಲಸ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದೆ. ಸಾರ್ವಜನಿಕ ಅಸಹಿಷ್ಣುತೆಯನ್ನು ಉತ್ತೇಜಿಸಲು ಕಾನೂನನ್ನು ಬಳಸಲಾಗುವುದಿಲ್ಲ, ಇಲ್ಲದಿದ್ದರೆ ಎಲ್ಲಾ ಚಲನಚಿತ್ರಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಉದ್ಭವಿಸುತ್ತದೆ.


ಇದನ್ನೂ ಓದಿ-Indian Economy: 2024 ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.6.7 ರಷ್ಟಿರಲಿದೆ, ಹಣದುಬ್ಬರದಲ್ಲಿಯೂ ಕೂಡ ಇಳಿಕೆ


'ಬಂಗಾಳದಲ್ಲಿ ಏನು ಸಮಸ್ಯೆ'
ಚಿತ್ರಕ್ಕೆ ನೀಡಲಾದ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ನಿರ್ಧರಿಸುವ ಮೊದಲು ಕೇರಳ ಸ್ಟೋರಿಯನ್ನು ವೀಕ್ಷಿಸಲು ಬಯಸುವುದಾಗಿ ನ್ಯಾಯಾಲಯ ಹೇಳಿದೆ. ದಿ ಕೇರಳ ಸ್ಟೋರಿ ನಿಷೇಧದಿಂದ ಉಂಟಾದ ವಿವಾದದ ಕುರಿತು ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ. ಗಲಭೆ ಆಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ನ್ಯಾಯಾಲಯಕ್ಕೆ ಅವರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಸಿಜೆಐ, ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಜವಾಬ್ದಾರಿಯಾಗಿದೆ.


ಇದನ್ನೂ ಓದಿ-IT Hardware ಗಾಗಿ 17000 ಕೋಟಿ ರೂ.ಗಳ ಪಿಎಲ್ಐ ಯೋಜನೆಗೆ ಅನುಮತಿ


ಚಿತ್ರವನ್ನು ಇಡೀ ದೇಶದಲ್ಲಿ ಬಿಡುಗಡೆ ಮಾಡಲು ಸಾಧ್ಯವಾದಾಗ ಬಂಗಾಳದ ಸಮಸ್ಯೆ ಏನು ಸಮಸ್ಯೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಒಂದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯಾದರೆ ಅಲ್ಲಿ ಚಿತ್ರವನ್ನು ಬ್ಯಾನ್ ಮಾಡಿ. ಒಂದೊಂದು ಜಿಲ್ಲೆಯ ಸಮಸ್ಯೆಯಿಂದಾಗಿ ಇಡೀ ರಾಜ್ಯದಲ್ಲಿ ಇದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ನ್ಯಾಯಪೀಠ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ