ನವದೆಹಲಿ: Supreme Court Judgement On NEET - ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಶಾಲಾಶಿಕ್ಷಣ  ಮಟ್ಟದಲ್ಲಿ ಅನೇಕ ಬದಲಾವಣೆಗಳನ್ನು ನೋಡಿದ ನಂತರ, ಇದೀಗ ವೈದ್ಯಕೀಯ ಅಧ್ಯಯನಕ್ಕೂ ಸಂಬಂಧಿಸಿದಂತೆ ಮಹತ್ವದ  ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್‌ನ (Supreme Court Judgement) ಆದೇಶದ ಪ್ರಕಾರ, ಇದೀಗ  NEET ನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಅಧ್ಯಯಯನಕ್ಕು ಅವಕಾಶ ಸಿಗಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ತಜ್ಞ ವೈದ್ಯರು, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳ ಭತ್ಯೆಗಳ ಪರಿಷ್ಕರಣೆ


NEET ನಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ
ಇನ್ಮುಂದೆ NEET ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿ (Medical Field) ಬಿಡಿಎಸ್ (BDS) ಅಂದರೆ ದಂತವೈದ್ಯರಾಗಲು ಪ್ರವೇಶ ಪಡೆಯಬಹುದು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಈಗ ನೀಟ್ ವಿಫಲವಾದರೂ ಸಹ ವೈದ್ಯಕೀಯ ಬಿಡಿಎಸ್ನ ಬಿಡಿಎಸ್ ಕೋರ್ಸ್ನಲ್ಲಿ ಪ್ರವೇಶ ಪಡೆಯಬಹುದು. ಈ ನಿರ್ಧಾರದ ಹಿಂದಿನ ಕಾರಣವೆಂದರೆ ದೇಶಾದ್ಯಂತ ಅನೇಕ ವೈದ್ಯಕೀಯ ಕಾಲೇಜುಗಳಲ್ಲಿ ಬಿಡಿಎಸ್ ಸೀಟುಗಳು ಖಾಲಿ ಇವೆ. ಈಗ ಸುಪ್ರೀಂ ಕೋರ್ಟ್‌ನ ತೀರ್ಪಿನೊಂದಿಗೆ, ಆ ಸ್ಥಾನಗಳು ತುಂಬಲ್ಪಡುತ್ತವೆ ಮತ್ತು ವಿದ್ಯಾರ್ಥಿಗಳ ವರ್ಷವೂ ಹಾಳಾಗುವುದರಿಂದ ತಪ್ಪುತ್ತದೆ.


ಇದನ್ನು ಓದಿ- CBSE Board Exam 2021: ಪರಿಷ್ಕೃತ ಪಠ್ಯಕ್ರಮದ ಆಡಿಯೇ ಪ್ರಶ್ನೆಗಳನ್ನು ಕೇಳಲಾಗುವುದು


ತಾನು ಈ ಮೊದಲು ನೀಡಿದ್ದ ತೀರ್ಪನ್ನು ಬದಲಾಯಿಸಿದ ಸುಪ್ರೀಂ 
ನೀಟ್ ಅಕಾಂಕ್ಷಿಗಳು ಪರೀಕ್ಷೆಯಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಎಂಬಿಬಿಎಸ್ (MBBS) ಮತ್ತು BDS ಪ್ರವೇಶ ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು 2016 ರಲ್ಲಿ ತೀರ್ಪನ್ನು ಪ್ರಕಟಿಸಿದ್ದರು. ಶೇ.50 ಕ್ಕಿಂತ ಕಡಿಮೆ ಅಂಕ ಪಡೆದ ಅರ್ಜಿದಾರರು ಯಾವುದೇ ಕೋಟಾ ಅಡಿಯಲ್ಲಿ ವೈದ್ಯಕೀಯ ಕೋಟಾದಲ್ಲಿ ಪ್ರವೇಶ ನೀಡಲಾಗುತ್ತಿರಲಿಲ್ಲ. ಸುಪ್ರೀಂನ ಈ ತೀರ್ಪಿನ ಬಳಿಕ ದೇಶದಲ್ಲಿ 7000 ಬಿಡಿಎಸ್ ಸ್ಥಾನಗಳು ಖಾಲಿ ಉಳಿದಿದ್ದವು. ಹೀಗಾಗಿ ಇದೀಗ ಸುಪ್ರೀಂ ಕೋರ್ಟ್ ಈ ನಿಟ್ಟಿನಲ್ಲಿ ತನ್ನ ಹೊಸ ತೀರ್ಪನ್ನು ಪ್ರಕಟಿಸಿದೆ. ಹೀಗಾಗಿ ಇದೀಗ ಇದೀಗ ನೀಟ್ ಫೇಲಾದ ವಿದ್ಯಾರ್ಥಿಗಳು ಸಹ ಬಿಡಿಎಸ್ ನಲ್ಲಿ ಪ್ರವೇಶ ಪಡೆಯಬಹುದು.


ಇದನ್ನು ಓದಿ-MBBS, ಬಿಡಿಎಸ್‌ನಲ್ಲಿ ಕರೋನಾ ವಾರಿಯರ್ಸ್‌ ಮಕ್ಕಳಿಗೆ ಸಿಗಲಿದೆ ಮೀಸಲಾತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.