ನವದೆಹಲಿ:  ಕಾಶ್ಮೀರದಲ್ಲಿ ಜನರ ಸ್ವಾತಂತ್ರ್ಯ ಮತ್ತು ಮಾಧ್ಯಮ ನಿರ್ಬಂಧಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಭಾಯಿಸುವಲ್ಲಿ ಭಾರತದ ಸುಪ್ರೀಂಕೋರ್ಟ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಪುನಃ ಸ್ಥಾಪಿಸಲು ನರೇಂದ್ರ ಮೋದಿ ಸರ್ಕಾರವನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.



COMMERCIAL BREAK
SCROLL TO CONTINUE READING

'ಹೇಬಿಯಸ್ ಕಾರ್ಪಸ್, ಚಳುವಳಿಯ ಸ್ವಾತಂತ್ರ್ಯ ಮತ್ತು ಮಾಧ್ಯಮ ನಿರ್ಬಂಧಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಭಾಯಿಸುವಲ್ಲಿ ಭಾರತದ ಸುಪ್ರೀಂಕೋರ್ಟ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಯುಎನ್ ಮಾನವ ಹಕ್ಕುಗಳ ಹೈಕಮಿಷನರ್ ವಕ್ತಾರ ರೂಪರ್ಟ್ ಕೊಲ್ವಿಲ್ಲೆ ಹೇಳಿದ್ದಾರೆ.



'ಕಾಶ್ಮೀರದ ಜನಸಂಖ್ಯೆಯು ಮಾನವ ಹಕ್ಕುಗಳಿಂದ ವಂಚಿತವಾಗುತ್ತಿರುವುದು ತುಂಬಾ ಕಳವಳ ಸಂಗತಿ, ಸದ್ಯ ಮಾನವ ಹಕ್ಕುಗಳ ಮೇಲೆ ಹೇರಿರುವ ನಿರ್ಬಂಧವನ್ನು ಸಡಿಲಗೋಳಿಸಬೇಕೆಂದು ನಾವು ಭಾರತೀಯ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಕೆಲವು ಕ್ರಮಗಳನ್ನು ಸಡಿಲಗೊಳಿಸಲಾಗಿದ್ದರೂ, ಮಾನವ ಹಕ್ಕುಗಳ ಮೇಲೆ ಅವುಗಳ ಪ್ರಭಾವವು ವ್ಯಾಪಕವಾಗಿ ಬೀರಿವೆ' ಎಂದು ಕೊಲ್ವಿಲ್ಲೆ ಹೇಳಿದರು.



ಕಾಶ್ಮೀರದಲ್ಲಿನ ನಿರ್ಭಂದ ಮಂಗಳವಾರ 86 ನೇ ದಿನಕ್ಕೆ ಕಾಲಿಡುತ್ತಿರುವುದರಿಂದ ಇಲ್ಲಿಯವರೆಗೆ ಎಸ್‌ಎಂಎಸ್ ಸೌಲಭ್ಯವಿಲ್ಲದ ಮೊಬೈಲ್ ದೂರವಾಣಿ ಸೇವೆಗಳ ಪೋಸ್ಟ್-ಪೇಯ್ಡ್ ಸಂಪರ್ಕವನ್ನು ಮರು ಸ್ಥಾಪಿಸಿದೆ. ಕಾಶ್ಮೀರ ಕಣಿವೆಯ ಹೆಚ್ಚಿನ ಭಾಗಗಳಲ್ಲಿ ಇನ್ನೂ ನಿಷೇದಾಜ್ಞೆ ಜಾರಿಯಲ್ಲಿದೆ, ಕಾಶ್ಮೀರಿಗಳು ಶಾಂತಿಯುತ ಸಭೆ ನಡೆಸುವ ಹಕ್ಕನ್ನು ಚಲಾಯಿಸುವುದಕ್ಕೆ ಅಡ್ಡಿಯುಂಟು ಮಾಡುತ್ತದೆ ಮತ್ತು ಆರೋಗ್ಯ, ಶಿಕ್ಷಣ ಮತ್ತು ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯದ ಹಕ್ಕುಗಳನ್ನು ನಿರ್ಬಂಧಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.


ಬಂಧನಕ್ಕೊಳಗಾದ ಜನರ ಮೇಲೆ ಚಿತ್ರಹಿಂಸೆ ಮತ್ತು ಕೆಟ್ಟದಾಗಿ ವರ್ತಿಸಿದ ಆರೋಪದ ಬಗ್ಗೆ ವರದಿಗಳು ಬಂದಿವೆ. ಇವುಗಳನ್ನು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು.ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಚಿತ್ರಹಿಂಸೆ ಸಂಪೂರ್ಣವಾಗಿ ಮತ್ತು ನಿಸ್ಸಂದಿಗ್ಧವಾಗಿ ನಿಷೇಧಿಸಲಾಗಿದೆ 'ಎಂದು ಕೊಲ್ವಿಲ್ಲೆ ಹೇಳಿದರು.