ನವದೆಹಲಿ: 2014 ರಲ್ಲಿನ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಸಾವಿನ ವಿಚಾರವಾಗಿ ಅಮಿತ್ ಶಾ ವಿರುದ್ದದ ಕೊಲೆ ಆರೋಪಗಳನ್ನು ಮರು ತನಿಖೆ ನಡೆಸುವುದಿಲ್ಲ ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿದೆ.


COMMERCIAL BREAK
SCROLL TO CONTINUE READING

ಲೋಹಿಯಾ ಸಾವು ಸ್ವಾಭಾವಿಕ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ಈ ಕುರಿತಾಗಿ ಸಲ್ಲಿಸಿದ್ದ ಮರು ಪರಿಶೀಲಿನಾ ಅರ್ಜಿಯನ್ನು ತಿರಸ್ಕರಿಸಿದೆ. ಅರ್ಜಿದಾರರಲ್ಲಿ ಒಬ್ಬರಾಗಿದ್ದ ಬಾಂಬೆ ಲಾಯರ್ಸ್ ಅಸೋಸಿಯೇಷನ್, ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿತ್ತು, ಆದರೆ ಈಗ ಅರ್ಜಿದಾರರ ಮನವಿಯನ್ನು ಕೋರ್ಟ್ ತಿರಸ್ಕರಿಸಿ ಕೊಲೆ ಕೇಸಿನ ಆರೋಪಗಳನ್ನು ಮತ್ತೆ ತನಿಖೆಗೆ ನಡೆಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.


ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣವನ್ನು ವಿಶೇಷ ಸಿಬಿಐ ನ್ಯಾಯಾಧೀಶರು ವಿಚಾರಣೆಗೆ ಒಳಪಡಿಸಿದ್ದರು. ಇನ್ನೊಂಡೆಗೆ ನ್ಯಾಯಾಧೀಶ ಲೊಯಾ ಅವರ ಕುಟುಂಬವು ಕಳೆದ ವರ್ಷ ಬೆದರಿಕೆಗೆ ಒಳಪಟ್ಟಿತ್ತು ಎಂದು ಹೇಳಿದ್ದರಿಂದಾಗಿ ಲೋಯಾ ಸಾವು ವಿವಾದಕ್ಕೆ ಕಾರಣವಾಗಿದ್ದಲ್ಲದೆ ಸ್ವತಂತ್ರ  ನ್ಯಾಯಾಂಗ ತನಿಖೆ ನಡೆಸಲು ಮನವಿಯನ್ನು ಮಾಡಿಕೊಳ್ಳಲಾಗಿತ್ತು. ಇದೆ ಜನವರಿಯಲ್ಲಿ, ನ್ಯಾಯಾಧೀಶ ಲೋಯಾ ಅವರ ಪುತ್ರ ಅನುಜ್ ಲೋಯಾ ತಮ್ಮ ಕುಟುಂಬವು ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದ್ದರು.