ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ನಡೆಸಿರುವ ರಫೇಲ್ ವಿಮಾನಗಳ ಖರೀಧಿ ಒಪ್ಪಂದದ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರವಾಗಿ ಇಂದು ಸುಪ್ರಿಂ ವಿಚಾರಣೆಯನ್ನು ಪ್ರಾರಂಭಿಸಿದೆ. 


COMMERCIAL BREAK
SCROLL TO CONTINUE READING

ಈ ಅರ್ಜಿ ಕುರಿತು ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್​ ಗೋಗೊಯ್​, ನ್ಯಾ.ಎಸ್​.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್​ ಅವರಿರುವ ನ್ಯಾಯಪೀಠ  ರಫೇಲ್ ವಿಚಾರವಾಗಿ ತಮಗೆ ರಕ್ಷಣಾ ಸಚಿವಾಲಯದಿಂದ ಯಾವುದೇ ಆಧಿಕಾರಿಗಳು ಬೇಡ ಈ ವಿಚಾರವಾಗಿ ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಲಿ ಎಂದು  ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ವಾಯುಪಡೆಯ ಉಪಮುಖ್ಯಸ್ಥ ಏರ್ ಮಾರ್ಷಲ್​ ವಿ.ಆರ್. ಚೌಧರಿ, ಮತ್ತು ಇತರೆ ಇಬ್ಬರು ಹಿರಿಯ ಅಧಿಕಾರಿಗಳು ಪೀಠದ ಮುಂದೆ ಹಾಜರಾಗಬೇಕಾಗಿದೆ.


ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಈ ಒಪ್ಪಂದದಲ್ಲಿ ಸುಪ್ರಿಂಕೋರ್ಟ್ ಮಧ್ಯಸ್ಥಿಕೆ ವಹಿಸುವುದನ್ನು ವಿರೋಧಿಸುತ್ತಾ ಇದನ್ನು ಸೂಕ್ತ ತಜ್ಞರು ಮಾತ್ರ ಪರ್ಶ್ನಿಸಬೇಕು ಎಂದು ತಿಳಿಸಿದರು.ಈ ಹಿಂದೆ ಸುಪ್ರಿಂಕೋರ್ಟ್ ಒಪ್ಪಂದದ ವಿಚಾರವಾಗಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸುಪ್ರಿಂಕೋರ್ಟ್ ಸೂಚನೆ ನೀಡಿತ್ತು.


ಇಂದು ಅರ್ಜಿದಾರರ ಪರ ಒಬ್ಬರಾಗಿರುವ  ಪ್ರಶಾಂತ್ ಭೂಶನ್ ಅವರು ವಾದ ಮಾಡುತ್ತಾ ಕೇಂದ್ರ ಸರ್ಕಾರ ಈ ರಫೇಲ್​ ಒಪ್ಪಂದವನ್ನು ರಹಸ್ಯವಾಗಿ ನಡೆಸುವ ಹುನ್ನಾರದಿಂದ ಇಡೀ ಸ್ವಾಧೀನ ಪ್ರಕ್ರಿಯೆಗೇ ಶಾರ್ಟ್​ ಸರ್ಕ್ಯೂಟ್​ ಮಾಡಿದೆ ಎಂದು ವಿಚಾರಣೆ ವೇಳೆ ತಿಳಿಸಿದರು, ನಂತರ ನ್ಯಾಯಪೀಠ ವಿಚಾರಣೆಯನ್ನು ಆಲಿಸಿ ಈ ಕ್ಷಣದಲ್ಲಿ ರಫೇಲ್ ಒಪ್ಪಂದದ ಮೊತ್ತವನ್ನು ತಿಳಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.