ನವದೆಹಲಿ: ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದವು ಭೂಮಿಗೆ ಸಂಬಂಧಿಸಿಲ್ಲ ಆದರೆ ಅದು ಭಾವನೆ ಮತ್ತು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.


COMMERCIAL BREAK
SCROLL TO CONTINUE READING

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಲ್ಲಿ ಒಬ್ಬರಾದ ಜಸ್ಟೀಸ್ ಎಸ್.ಎಸ್. ಬಾಬ್ಡೆ ಅವರು, "ಇತಿಹಾಸದ ಬಗ್ಗೆ ನಮಗೆ ಹೇಳಬೇಡಿ, ನಮಗೆ ಇತಿಹಾಸವೆಲ್ಲ ಗೊತ್ತು,ದಾಳಿ ಯಾರು ಮಾಡಿದ್ದಾರೆ ಎನ್ನುವುದನ್ನು ಈಗ ಅಳಿಸಲು ಆಗುವುದಿಲ್ಲ, ಬಾಬರ ಏನು ಮಾಡಿದ್ದ, ಆಗ ರಾಜಾ ಯಾರಿದ್ಧ, ಆಗ ಮಸೀದಿ ಅಥವಾ ದೇವಸ್ಥಾನ ಇತ್ತೋ ಎನ್ನುವ ಬಗ್ಗೆ ನಮಗೆ ಬೇಕಾಗಿಲ್ಲ ಎಂದು ಹೇಳಿದರು. ಈಗ ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕ ತೀರ್ಮಾನಿಸಬೇಕೇ ಎನ್ನುವುದನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ. 


ಅಯೋಧ್ಯ ವಿವಾದದಲ್ಲಿ ಅರ್ಜಿದಾರರಲ್ಲಿ ಒಬ್ಬರಾಗಿರುವ ಹಿಂದೂ ಮಹಾಸಭಾ "ಸಾರ್ವಜನಿಕರು ಮಧ್ಯಸ್ಥಿಕೆಗೆ ಒಪ್ಪುವುದಿಲ್ಲ" ಎಂದು ವಾದಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟೀಸ್ ಬಾಬ್ದೆ "ಇದು ವಿಫಲವಾಗಿದೆ ಎಂದು ನೀವು ಹೇಳುತ್ತಿದ್ದಿರಿ, ಎಲ್ಲವನ್ನು ಪೂರ್ವಾಗ್ರಹ ಪೀಡಿತರಾಗಿ ನೋಡಬೇಡಿ , ಮಧ್ಯಸ್ಥಿಕೆ ನಡೆಸಲು ನಾವು ಪ್ರಯತ್ನಿಸುತ್ತೆವೆ" ಎಂದರು. ಫೆಬ್ರವರಿ 26 ರಂದು ಸುಪ್ರೀಂ ಕೋರ್ಟ್ ನ್ಯಾಯಾಲಯದಿಂದ ನೇಮಕಗೊಂಡ ಮಧ್ಯವರ್ತಿಗೆ ಈ ವಿಷಯವನ್ನು ಉಲ್ಲೇಖಿಸಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸಲಿದೆ.


ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠ ಮಧ್ಯಸ್ಥಿಕೆ ಮೂಲಕ ದಶಕಗಳ ವಿವಾದವನ್ನು ಸೌಹಾರ್ದವಾಗಿ ಬಗೆಹರಿಸುವ ಬಗ್ಗೆ ಅರ್ಜಿದಾರದಲ್ಲಿ ಕೇಳಿತು, ಇದರಿಂದ ಉಭಯ ಬಣಗಳ ನಡುವಿನ ಸಂಬಂಧ ವೃದ್ದಿಗೆ ನೆರವಾಗಲಿದೆ ಎಂದು ಹೇಳಿದರು.ಈ ವಿವಾದವನ್ನು ಬಗೆ ಹರಿಸಲು ಕನಿಷ್ಠ ಶೇಕಡಾ ಒಂದರಷ್ಟು ಅವಕಾಶವಿದ್ದರೆ ಪಕ್ಷಗಳು ಮಧ್ಯಸ್ಥಿಕೆಗೆ ಮುಂದಾಗಬೇಕು ಎಂದು ನ್ಯಾಯಮೂರ್ತಿ ಬಾಬ್ಡೆ, ಡಿ.ವೈ. ಚಂದ್ರಚೂದ್, ಅಶೋಕ್ ಭೂಷಣ್ ಮತ್ತು ಎಸ್ಎ ನಝೀರ್ ಅವರನ್ನೋಳಗೊಂಡ ಪೀಠ ಅಭಿಪ್ರಾಯಪಟ್ಟಿತು.


ಉತ್ತರ ಪ್ರದೇಶ ಸರಕಾರವು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ನಿಖರತೆಯನ್ನು ಹಿಂದೂ ಮತ್ತು ಮುಸ್ಲಿಮ್ ಎರಡೂ ಪಕ್ಷಗಳು ಪರಿಶೀಲಿಸುತ್ತಿದ್ದ ಸಮಯದಲ್ಲಿ ಜಸ್ಟೀಸ್ ಬಾಬ್ಡೆ ಅವರು ಮಧ್ಯಸ್ಥಿಕೆಗೆ ಮೂಲಕ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಸಲಹೆ ನೀಡಿದರು. 2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆಯಲ್ಲಿ 2.77 ಎಕರೆ ಭೂಮಿಯನ್ನು  ರಾಮ್ ಲಾಲ್ಲಾ, ಸುನ್ನಿ ವಕ್ಫ್ ಬೋರ್ಡ್, ಮತ್ತು ನಿರ್ಮೊಹಿ ಅಖಾರಾ. ಮೂರು ವಿಭಾಗವಾಗಿ ಹಂಚಿತ್ತು.ಈಗ ಸುಪ್ರೀಂ ನಲ್ಲಿ ಈ ನಡೆಯನ್ನು ವಿರೋಧಿಸಿ 14 ಅರ್ಜಿಗಳು ಸಲ್ಲಿಕೆಯಾಗಿವೆ.