ನವದೆಹಲಿ: ಸುಪ್ರಿಂಕೋರ್ಟ್ ಸೋಮವಾರದಂದು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ ಲಿಮಿಟೆಡ್ ಗೆ ಎರಿಕ್ಸನ್ ಇಂಡಿಯ ಪ್ರೈ ಲಿಮಿಟೆಡ್ ನ ಬೇಬಾಕಿ ವಿಚಾರವಾಗಿ ಸಲ್ಲಿಸಿರುವ ಅರ್ಜಿಗೆ ನಾಲ್ಕು ವಾರಗಳ ಒಳಗಾಗಿ ಉತ್ತರಿಸುವಂತೆ ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಸ್ವೀಡಿಶ್ ಮೂಲಕದ ಕಂಪನಿ ಎರಡನೇ ಬಾರಿಗೆ 550 ಕೋಟಿ ರೂ ಗಳ ಬಾಕಿ ಮೊತ್ತವನ್ನು ತೀರಿಸದಿರುವ ವಿಚಾರವನ್ನು ಪ್ರಶ್ನಿಸಿ ಸುಪ್ರಿಂಗೆ ಅರ್ಜಿ ಸಲ್ಲಿಸಿದೆ. ರಿಲಯನ್ಸ್ ಕಮ್ಯೂನಿಕೇಶನ್ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ ಈಗ 118 ಕೋಟಿ ರೂಗಳನ್ನು ಸ್ವೀಕರಿಸುವಂತೆ ಎರಿಕ್ಸನ್ ಗೆ ತಿಳಿಸಿದರು.ಆದರೆ  ಇದನ್ನು ತಿರಸ್ಕರಿಸಿರುವ ಎರಿಕ್ಸನ್ 550 ಕೋಟಿ ರೂಗಳನ್ನು ಕೂಡ ಸಂದಾಯ ಮಾಡಬೇಕೆಂದು ಹೇಳಿದೆ.


ನ್ಯಾಯಮೂರ್ತಿ ಆರ್.ಎಫ್ ನಾರಿಮನ್ ನೇತೃತ್ವದ ಪೀಠವು ರಿಲಯನ್ಸ್ ಕಮ್ಯೂನಿಕೇಷನ್ ಗೆ ನೋಂದಣಿ ವಿಭಾಗದಲ್ಲಿ 118 ಕೋಟಿ ರೂಗಳನ್ನು ಸಂದಾಯ ಮಾಡಬೇಕೆಂದು ಸೂಚಿಸಿದೆ.ಇನ್ನೊಂದೆಡೆ ರಿಲಯನ್ಸ್ ಕಮ್ಯೂನಿಕೇಷನ್ ಎರಿಕ್ಸನ್ ಕಂಪನಿ ಹಣ ಪಾವತಿ ವಿಚಾರವನ್ನು ಮಾಧ್ಯಮದ ಎದುರು ದೊಡ್ಡದಾಗಿ ಬಿಂಬಿಸುತ್ತದೆ ಎಂದರು.