ನವದೆಹಲಿ: ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾನೂನು ರೂಪಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿದೆ.


COMMERCIAL BREAK
SCROLL TO CONTINUE READING

ಸ್ಕಂದ್ ಬಾಜ್‌ಪೈ ಮತ್ತು ಅಭುದಯ ಮಿಶ್ರಾ ಎನ್ನುವ ಇಬ್ಬರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ ಈ ಅರ್ಜಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಪ್ರವೇಶದ ನಿಯಂತ್ರಣ, ವ್ಯಕ್ತಿಗಳ ಪ್ರೊಫೈಲ್ ಪರಿಶೀಲನೆ ಹಾಗೂ ಸೇಡಿನ ಅಶ್ಲೀಲತೆ, ಹಾಗೂ ಕ್ರಿಮಿನಲ್ ತಿರುಚುವಿಕೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬಾಬ್ದೆ ನೇತೃತ್ವದ ಪೀಠವು ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿದ್ದು, ಈಗ ಈ ವಿಚಾರವಾಗಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.ಮುಂಬರುವ ದಿನಗಳಲ್ಲಿ ಈ ಇಂತಹ ವಿಷಯವನ್ನು ಎದುರಿಸಲು ಸರ್ಕಾರ ಸೂಕ್ತ ಕಾನೂನನ್ನು ರೂಪಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.


Tablighi Jamaat case: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್


ಈ ವರ್ಷದ ಏಪ್ರಿಲ್‌ನಲ್ಲಿ ದೆಹಲಿ ಮೂಲದ ಎನ್‌ಜಿಒ ಪ್ರಕಟಿಸಿದ ವರದಿಯನ್ನು ಉಲ್ಲೇಖಿಸಿ, ಚೈಲ್ಡ್ ಪೋರ್ನ್ ನಂತಹ ಪ್ರಮುಖ ಪದಗಳ ಹುಡುಕಾಟದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ವೀಡಿಯೊಗಳು ಮತ್ತು ಖಾಸಗಿ ಗ್ರಾಫಿಕ್‌ಗಳ ಲಭ್ಯತೆಯು ಪೀಡಿತ ವ್ಯಕ್ತಿಗಳಿಂದ ವೈಯಕ್ತಿಕ ಮಾಹಿತಿಯ ಪ್ರಸಾರವನ್ನು ನಿಯಂತ್ರಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಇದೇ ಸಂದರ್ಭದಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಬೇರು ಸಹಿತ ಕಿತ್ತು ಹಾಕುವ ಅವಶ್ಯಕತೆಯಿದ್ದು.ಈ ನಿಟ್ಟಿನಲ್ಲಿ ಇದನ್ನು ಪರಿಶೀಲಿಸುವ ಕಾರ್ಯವಿಧಾನವನ್ನು ರೂಪಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಪರಿಶೀಲಿಸಿದ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ಹೊಣೆಗಾರಿಕೆಯನ್ನು ಉತ್ತೇಜಿಸುತ್ತದೆ ಮತ್ತು ವರ್ಚುವಲ್ ಜಗತ್ತಿನಲ್ಲಿ ಅಪರಾಧಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದಂತೆ ವ್ಯಕ್ತಿಗಳನ್ನು ತಡೆಯುತ್ತದೆ ಎಂದು ಅದು ಹೇಳಿದೆ.ಆನ್ ಲೈನ್ ನಲ್ಲಿ ವ್ಯಕ್ತಿಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ತಿರುಚುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಇದು ಕಿರುಕುಳ ಮತ್ತು ಶೋಷಣೆಗೆ ಕಾರಣವಾಗುವುದರಿಂದ ಇದನ್ನು ತಡೆಯುವ ಅವಶ್ಯಕತೆಯಿದೆ ಎಂದು ಹೇಳಿದೆ.


ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ, ಸುಪ್ರೀಂಕೋರ್ಟ್ ನಿಂದ ತಡೆ


ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲತೆಯ ಆತಂಕಕಾರಿ ವಿಷಯ ಮತ್ತು ಒಟ್ಟಾರೆಯಾಗಿ ಸಮಾಜದ ಮೇಲೆ ಅದರ ಪರಿಣಾಮದ ಬಗ್ಗೆ ಅಧ್ಯಯನ ಮಾಡಲು ರಾಜ್ಯಸಭೆಯ ತಾತ್ಕಾಲಿಕ ಸಮಿತಿಯ ವರದಿಯಲ್ಲಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನವೀಕರಿಸಲು ಮತ್ತು ಹದಿ ಹರೆಯದ ಲೈಂಗಿಕ ಶಿಕ್ಷಣವನ್ನು ಕಡ್ಡಾಯ ವಿಷಯವಾಗಿ ಬೆಳೆಸಲು ಮತ್ತು ಆನ್‌ಲೈನ್ ಸುರಕ್ಷತೆ ಮತ್ತು ನಡವಳಿಕೆಗೆ ಸಂಬಂಧಿಸಿದ ವಿಷಯವನ್ನು ಪರಿಚಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಇ-ವ್ಯಾಲೆಟ್‌ಗಳು ಮತ್ತು ಯುಪಿಐ ವಹಿವಾಟಿನ ಮೂಲಕ ಪಡೆದ ಹಣದ ವಿನಿಮಯಕ್ಕಾಗಿ ಜನರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಖಾಸಗಿ ಗ್ರಾಫಿಕ್ ಮಾಹಿತಿ, ಅತ್ಯಾಚಾರದ ವೀಡಿಯೊಗಳು ಮತ್ತು ಅಪರಿಚಿತ ವ್ಯಕ್ತಿಗಳ ಇತರ ವಿಷಯಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.