ಕೋಲ್ಕತ್ತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವಿಚಾರವಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಸ್ವಾಗತಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಮಮತಾ "ಪ್ರಜಾಪ್ರಭುತ್ವ ಮತ್ತು ಜನತೆಯ ವಿಜಯ"  ಎಂದು ಬಣ್ಣಿಸಿದ್ದಾರೆ ಅಲ್ಲದೆ ಪಂಚಾಯತ ಚುನಾವಣೆಯ ವಿಚಾರವಾಗಿ ಕಾಂಗ್ರೆಸ್, ಸಿಪಿಎಂ,ಮತ್ತು ಬಿಜೆಪಿ ಪಕ್ಷಗಳ ಟೀಕೆಯನ್ನು ಸುಳ್ಳು ಪ್ರಚಾರ ಎಂದು ಅವರು ಕಿಡಿಕಾರಿದ್ದಾರೆ. ಅಲ್ಲದೆ ಇದು ರಾಜಕೀಯ ಲಾಭ ಪಡೆಯಲು ಮೂರು ಪಕ್ಷಗಳು ಯೋಜಿಸಿದ ಕ್ರಮ ಎಂದು ವ್ಯಾಖ್ಯಾನಿಸಿದ್ದಾರೆ.


"ಇದು ಜನರ ಮತ್ತು  ಪ್ರಜಾಪ್ರಭುತ್ವ ವಿಜಯ ಎಂದು ನಾನು ಭಾವಿಸುತ್ತೇನೆ,ಮತ್ತು ಈ ದೇಶದ ಜನರಿಗೆ ಅದನ್ನುಅರ್ಪಿಸಲು ನಾನು ಬಯಸುತ್ತೇನೆ" ಎಂದು ಮಾಮತಾ ಬ್ಯಾನರ್ಜಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.


ಸಿಪಿಐ (ಎಂ) ಮತ್ತು ಬಿಜೆಪಿ ಪಕ್ಷಗಳು  ಸುಪ್ರೀಂ ಕೋರ್ಟ್ ನಲ್ಲಿ ಪಶ್ಚಿಮ ಬಂಗಾಳದಲ್ಲಿನ 20,000 ಕ್ಕೂ ಅಧಿಕ ಸ್ಥಳೀಯ ಸಂಸ್ಥೆ ಚುನಾವಣೆಗಳ ಸೀಟುಗಳನ್ನು ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ದವು, ಆದರೆ ಈ ಅರ್ಜಿಯನ್ನು ಸುಪ್ರಿಂಕೋರ್ಟ್ ಈಗ ತಿರಸ್ಕರಿಸಿದೆ.
.