500 ಕೋಟಿ ದಂಡ ಪ್ರಕರಣದಲ್ಲಿ ವೋಕ್ಸ್ ವ್ಯಾಗನ್ ಗೆ `ಸುಪ್ರೀಂ` ರಿಲೀಫ್
ಜರ್ಮನ್ ಮೂಲದ ಕಾರು ಉತ್ಪಾದಕ ಕಂಪನಿ ವೋಕ್ಸ್ ವ್ಯಾಗನ್ ಗೆ ಈಗ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ವಿಧಿಸಿದ್ದ 500 ಕೋಟಿ ದಂಡದ ವಿಚಾರವಾಗಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿಯುವವರೆಗೂ ಯಾವುದೇ ರೀತಿಯ ಹಣ ವಸೂಲಿ ಮಾಡಲು ಒತ್ತಡ ಹೇರುವಂತಿಲ್ಲ ಎಂದು ಆದೇಶಿಸಿದೆ.
ನವದೆಹಲಿ: ಜರ್ಮನ್ ಮೂಲದ ಕಾರು ಉತ್ಪಾದಕ ಕಂಪನಿ ವೋಕ್ಸ್ ವ್ಯಾಗನ್ ಗೆ ಈಗ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ವಿಧಿಸಿದ್ದ 500 ಕೋಟಿ ದಂಡದ ವಿಚಾರವಾಗಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿಯುವವರೆಗೂ ಯಾವುದೇ ರೀತಿಯ ಹಣ ವಸೂಲಿ ಮಾಡಲು ಒತ್ತಡ ಹೇರುವಂತಿಲ್ಲ ಎಂದು ಆದೇಶಿಸಿದೆ.
ಡಿಸೇಲ್ ಇಂಜಿನ್ ಗಳನ್ನು ಹೊಂದಿದ ಸಾಧನಗಳನ್ನು ಅಳವಡಿಸಿದ ಹಿನ್ನಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಿದೆ ಎಂದು ಹಸಿರು ನ್ಯಾಯಾಧಿಕರಣ ವೋಕ್ಸ್ ವ್ಯಾಗನ್ ಕಂಪನಿಗೆ 500 ಕೋಟಿ ರೂ ದಂಡವನ್ನು ವಿಧಿಸಿತ್ತು.ಅಲ್ಲದೆ ಎರಡು ತಿಂಗಳ ಒಳಗಾಗಿ ಹಣವನ್ನು ಪಾವತಿಸಬೇಕೆಂದು ವೋಕ್ಸ್ ವ್ಯಾಗನ್ ಕಂಪನಿಗೆ ಸೂಚನೆ ನೀಡಿತ್ತು.ಈ ಹಣದಿಂದ ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಗುಣ ಮಟ್ಟವನ್ನು ಸುಧಾರಿಸಲು ಬಳಸಿಕೊಳ್ಳಲಾಗುವುದು ಎಂದು ಎನ್ ಜಿ ಟಿ ಹೇಳಿತ್ತು.
ಆದರೆ ಎನ್ ಜಿ ಟಿ ತೀರ್ಪನ್ನು ವೋಕ್ಸ್ ವ್ಯಾಗನ್ ಕಂಪನಿ ನಿರಂಕುಶವಾದದ್ದು ಸಕಾರಣವಿಲ್ಲದ್ದು ಎಂದು ಹೇಳಿ ಸುಪ್ರೀಂಕೋರ್ಟ್ ನ ಮೊರೆಹೋಗಿತ್ತು.ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ.ಬಾಬ್ದೆ ನೇತೃತ್ವದ ಪೀಠವು ದಂಡ ವಿಧಿಸುವುದಕ್ಕೆ ತಾತ್ಕಲಿಕ ತಡೆ ನೀಡಿದೆ ಇದರಿಂದ ಜರ್ಮನಿ ಮೂಲದ ಕಂಪನಿ ತಾತ್ಕಾಲಿಕ ನಿಟ್ಟುಸಿರು ಬಿಡುವಂತಾಗಿದೆ.