ಸೂರತ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸಹಾಯ ಮಾಡಲು ಇಡೀ ದೇಶವೇ ಒಂದಾಗಿದೆ. ಏತನ್ಮಧ್ಯೆ ಸೂರತ್ ನ ಜನರು ಹುತಾತ್ಮರ ಕುಟುಂಬಕ್ಕೆ 65 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹುತಾತ್ಮ ಸೈನಿಕರಿಗಾಗಿ ಮೌನಾಚರಣೆ:
ಸೋಮವಾರ ಸೂರತ್ ನಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೂ ಮೊದಲು ಜನರು ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ರಾಷ್ಟ್ರೀಯ ಗೀತೆ ಹಾಡುವುದರ ಮೂಲಕ ಗೌರವ ಸಲ್ಲಿಸಿದರು. ಬಳಿಕ ಕೆಲಕಾಲ ಮೌನಾಚರಣೆ ಆಚರಿಸಿದರು. ಸಾಮೂಹಿಕ ವಿವಾಹದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದು ದೇಶದಲ್ಲೇ ಇದೇ ಮೊದಲು ಎನ್ನಬಹುದು.


ಸಾಮೂಹಿಕ ವಿವಾಹ ಏರ್ಪಡಿಸಿದ್ದ ಸಂಘಟನೆಯ ಮುಖ್ಯಸ್ಥ ಕನ್ಜಿಭಾಯಿ ಭಲಾನ ಮಾತನಾಡುತ್ತಾ, "ಸಾಮೂಹಿಕ ವಿವಾಹದ ಮೂಲಕ ಸಂಸ್ಥೆಯು ಹೊಸ ಕಲ್ಪನೆಗಳನ್ನು ಮತ್ತು ಹೊಸ ಆಲೋಚನೆಗಳನ್ನು ಪಡೆಯುತ್ತದೆ". ಕೈಗಾರಿಕೊದ್ಯಮಿಗಳ ಆರು ಹೆಣ್ಣು ಮಕ್ಕಳು ತಮ್ಮ ಜನ್ಮದಿನದ ಸಮಾರಂಭಕ್ಕಾಗಿ ಖರ್ಚು ಮಾಡುವ ಹಣವನ್ನು ಆರು ಹೆಣ್ಣು ಮಕ್ಕಳ ವಿವಾಹಕ್ಕಾಗಿ ಖರ್ಚು ಮಾಡಿದ್ದಾರೆ. ರಾಷ್ಟ್ರಕ್ಕಾಗಿ ಕೆಲಸ ಮಾಡಲು ಸೂರತ್ ಜನ ಯಾವಾಗಲೂ ಹಿಂದೆ ಸರಿಯುವುದಿಲ್ಲ. ಇಡೀ ಭಾರತದಲ್ಲಿ ಸೂರತ್ ಜನರು ಕಳೆದ 20 ವರ್ಷಗಳಿಂದ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ. ಹುತಾತ್ಮರ ಕುಟುಂಬಕ್ಕೆ ನಗದು ನೆರವು ಒದಗಿಸುವ ಪವಿತ್ರ ಕೆಲಸವನ್ನು ಸೂರತ್ ಜನರು ಮಾಡಿದ್ದಾರೆ. ಮದುವೆಯಲ್ಲಿ ಸಂಗ್ರಹಿಸಿದ ಉಡುಗೊರೆ ಮೊತ್ತವನ್ನು ಹುತಾತ್ಮರ ಕುಟುಂಬಕ್ಕೆ ನೀಡುವಂತಹ ಪುಣ್ಯದ ಕೆಲಸವನ್ನು ಸೂರತ್ ಜನತೆ ಮಾಡಿದ್ದಾರೆ ಎಂದು ಹೇಳಿದರು.