ನವದೆಹಲಿ : 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ದೆಹಲಿಯಲ್ಲಿ ನಡೆಯಿತು. ಅದ್ಭುತ ನಟನೆಗಾಗಿ ಸೂರ್ಯ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ಈ ಅದ್ಭುತ ಕ್ಷಣವನ್ನು ಸ್ಟಾರ್‌ ದಂಪತಿ ಪರಸ್ಪರ ಫೋಟೋದಲ್ಲಿ ಸೆರೆ ಹಿಡಿದು ಖುಷಿಪಟ್ಟರು.


COMMERCIAL BREAK
SCROLL TO CONTINUE READING

ಇಂದು (ಸೆಪ್ಟೆಂಬರ್ 30) ದೆಹಲಿಯ ವಿಗ್ಯಾನ್​ ಭವನದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜ್ಯೋತಿಕಾ ಅವರಿಗೆ ಸೂರರೈ ಪೊಟ್ರು ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು. ಕನ್ನಡದ ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರವಾಗಿ ತಲೆದಂಡ, ಅತ್ಯುತ್ತಮ ಆಡಿಯೋಗ್ರಫಿಗಾಗಿ ಡೊಳ್ಳು ಚಿತ್ರ, ಸಾಂಸ್ಕೃತಿಕ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾದದ ನವನೀತ’ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಇನ್ನು ಪ್ರಶಸ್ತಿ ಸ್ವೀಕರಿಸಲು ದೇಶಾದ್ಯಂತದ ಚಲನಚಿತ್ರ ಕಲಾವಿದರು ಮತ್ತು ನಟರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಹಿರಿಯ ನಟಿ ಆಶಾ ಪರೇಖ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು.


ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಹೆಚ್ಚಳ : ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಸಂಭವ!


ಶಿವರಂಜನಿ ಸೇರಿದಂತೆ ಹಲವು ಚಲನಚಿತ್ರ ನಟರು 2020 ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು. ನಿರ್ದೇಶಕರಾದ ಸುಧಾ ಕೊಂಗರ, ವಸಂತ್, ಮಂಡೇಲಾ ನಿರ್ದೇಶಕ ಮಡೋನ್ ಅಶ್ವಿನ್, ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್, ಎಸ್.ಥಮನ್ (ವೈಕುಂಡಪುರಂ ಲೋ - ತೆಲುಗು) ಮತ್ತಿತರರು ಭಾಗವಹಿಸಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.