ಮೋದಿ ಸಚಿವ ಸಂಪುಟದಲ್ಲಿ ಸುಷ್ಮಾಗೆ ಇಲ್ಲ ಸ್ಥಾನ, ನಾಯಕಿ ಸೇವೆ ಸ್ಮರಿಸಿದ ಟ್ವಿಟ್ಟರಿಗರು
ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸರ್ಕಾರದ ಸಚಿವ ಸಂಪುಟದಿಂದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಹೊರಗೆ ಇಟ್ಟಿರುವ ಕ್ರಮಕ್ಕೆ ಅಸಮಧಾನ ಹೊರ ಹಾಕಿದ್ದಾರೆ.ಅಲ್ಲದೆ ಇದುವರೆಗೆ ಅವರು ಸರ್ಕಾರದಲ್ಲಿದ್ದುಕೊಂಡು ಮಾಡಿದ ಸಾಧನೆ ಬಗ್ಗೆ ಟ್ವಿಟ್ಟರಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸರ್ಕಾರದ ಸಚಿವ ಸಂಪುಟದಿಂದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಹೊರಗೆ ಇಟ್ಟಿರುವ ಕ್ರಮಕ್ಕೆ ಅಸಮಧಾನ ಹೊರ ಹಾಕಿದ್ದಾರೆ.ಅಲ್ಲದೆ ಇದುವರೆಗೆ ಅವರು ಸರ್ಕಾರದಲ್ಲಿದ್ದುಕೊಂಡು ಮಾಡಿದ ಸಾಧನೆ ಬಗ್ಗೆ ಟ್ವಿಟ್ಟರಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸುಷ್ಮಾ ಸ್ವರಾಜ್ ತಮ್ಮ ಟ್ವೀಟ್ ಮೂಲಕ ಅನಿವಾಸಿ ಭಾರತೀಯ ಸಮಸ್ಯೆ ಬಗ್ಗೆ ಸ್ಪಂದಿಸುವ ರೀತಿ ಸಾಕಷ್ಟು ಗಮನ ಸೆಳೆದಿತ್ತು. ಗುರುವಾರದಂದು ನೂತನ ಸಚಿವ ಸಂಪುಟದ ಪ್ರಮಾಣ ವಚನ ಸಲ್ಲಿಸಿದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರ ಅನುಪಸ್ಥಿತಿ ಸಚಿವ ಸಂಪುಟದಲ್ಲಿ ಎದ್ದು ಕಾಣುತ್ತಿತ್ತು.
ಇತ್ತೀಚಿಗೆ ಕಾಂಗ್ರೆಸ್ ಪಕ್ಷದಿಂದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿರುವ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ನಲ್ಲಿ "ದೇಶವು ನಿಮ್ಮನ್ನು ಕ್ಯಾಬಿನೆಟ್ ನಲ್ಲಿ ಮಿಸ್ ಮಾಡಿಕೊಳ್ಳುತ್ತದೆ. ನೀವು ಭಾವನಾತ್ಮಕತೆ ಮತ್ತು ಮೌಲ್ಯಗಳನ್ನು ಸಚಿವಾಲಯಕ್ಕೆ ತಂದಿದ್ದೀರಿ ಅದೊಂದು ರೀತಿಯ ಚಿಕಿತ್ಸಕ ಮನೋಭಾವದಂತೆ" ಎಂದು ಬರೆದು ಕೊಂಡಿದ್ದಾರೆ.
ಇನ್ನೊಂದೆಡೆಗೆ ಹಿರಿಯ ಬಾಲಿವುಡ್ ನಟಿ ಸೋನಿ ರಾಜ್ದಾನ್ "ನೀವು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಿರಿ ಮೇಡಂ. ಯಾರಿಗೆಲ್ಲಾ ನೀವು ಸಹಾಯ ಮಾಡಿದ್ದಿರೋ ಅವರೆಲ್ಲರೂ ಕೂಡ ನಿಮ್ಮನ್ನು ಮರೆಯುವುದಿಲ್ಲ, ನಿಮ್ಮ ಒಳ್ಳೆಯ ಕಾರ್ಯಯೋದ್ದೇಶಗಳ ಬಗ್ಗೆ ಓದಿರುವರೋ ಅವರೆಲ್ಲಾ ನಿಮ್ಮ ಯಾವಾಗಾಲು ಸ್ಮರಿಸಿಕೊಳ್ಳುತ್ತಾರೆ " ಎಂದು ಟ್ವೀಟ್ ಮಾಡಿದ್ದಾರೆ.
ಈ ಬಾರಿಗೆ ಸಚಿವ ಸಂಪುಟದಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜ್ಯವರ್ಧನ್ ಸಿಂಗ್ ರಾಥೋಡ್, ಮನೇಕಾ ಗಾಂಧಿ ಮತ್ತು ಜಯಂತ್ ಸಿನ್ಹಾ ಮೊದಲಾದವರು ಅನುಪಸ್ಥಿತಿ ಎದ್ದುಕಾಣುತ್ತಿತ್ತು.