ನವದೆಹಲಿ: ಹಾರುವ ಸಿಖ್ ಎಂದೇ ಖ್ಯಾತಿ ಪಡೆದ ಮಿಲ್ಖಾ ಸಿಂಗ್ ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಅವರ ಪತಿ ಹೋಲಿಕೆ ಮಾಡಿದ್ದಾರೆ.ಅಷ್ಟಕ್ಕೂ ಅವರು ಈ ಹೋಲಿಕೆ ಮಾಡಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ. 


COMMERCIAL BREAK
SCROLL TO CONTINUE READING

ಇಂದು ಸುಷ್ಮಾ ಸ್ವರಾಜ್ ಇಂದೋರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಆರೋಗ್ಯದ ಸ್ಥಿತಿ ಉತ್ತಮವಾಗಿಲ್ಲದ ಕಾರಣ ತಾವು 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.


ಈಗ ಈ ಅವರ ಹೇಳಿಕೆಗೆ ಧನ್ಯವಾದ ಅರ್ಪಿಸಿರುವ ಪತಿ ಸ್ವರಾಜ್ ಕುಶಾಲ್ ಅವರ ಈ ನಿರ್ಧಾರವನ್ನು ಹಾರುವ ಸಿಖ್ ಎಂದೇ ಖ್ಯಾತಿ ಪಡೆದಿದ್ದ ಮಿಲ್ಖಾ ಸಿಂಗ್ ಗೆ ಹೋಲಿಕೆ ಮಾಡಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಮೇಡಂ- ಇನ್ನು ಮುಂದೆ ಯಾವುದೇ ರೀತಿಯ ಚುನಾವಣೆ ಸ್ಪರ್ಧೆಯಿಂದ ಸ್ಪರ್ಧಿಸಲು ಹಿಂದೆ ಸರಿಯುತ್ತಿರುವುದಕ್ಕೆ ಧನ್ಯವಾದಗಳು .ನನಗೆ ಮಿಲ್ಖಾ ಸಿಂಗ್ ತನ್ನ ಓಟಕ್ಕೆ ವಿದಾಯ ಹೇಳುವ ಸಮಯವನ್ನು ಇದು ನೆನಪಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 


ಇಂದೋರ್ ವೊಂದರ ರ್ಯಾಲಿಯಲ್ಲಿ " ನಾನು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ ಆದರೆ ಇದನ್ನು ಪಕ್ಷವು ನಿರ್ಧರಿಸಬೇಕು" ಎಂದು ಸುಷ್ಮಾ ಸ್ವರಾಜ್ ತಿಳಿಸಿದರು.ಈ ಹಿಂದೆ ಡಿಸೆಂಬರ್ 2016 ರಲ್ಲಿ ಸುಷ್ಮಾ ಸ್ವರಾಜ್ ಅವರು ಕಿಡ್ನಿ ಸಂಬಂಧಿತ ಕಾಯಿಲೆಗೆ ಒಳಪಟ್ಟಿದ್ದರು.