VIDEO: ಪಾಕಿಸ್ತಾನದ ಟಿವಿ ಸಂದರ್ಶನವೊಂದರಲ್ಲಿ ಸುಷ್ಮಾ ಅವರ `ಅಟಲ್ ವಾಣಿ`
1998-2004ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಂದಿನ ಮಾಹಿತಿ ಪ್ರಸಾರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಈ ವಿಷಯವನ್ನು ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಹಳ ಬಲವಾಗಿ ಪ್ರತಿಪಾದಿಸಿದರು.
ನವದೆಹಲಿ: ಇತ್ತೀಚೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಶ್ಮೀರ ವಿಷಯದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಧ್ಯಸ್ಥಿಕೆಯ ವಿವಾದಾತ್ಮಕ ಹೇಳಿಕೆಯ ನಂತರ, ಈ ವಿಷಯದ ಬಗ್ಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ಮಾತ್ರ ನಡೆಯಲಿದೆ ಎಂದು ಭಾರತ ಎರಡು ಪದಗಳಲ್ಲಿ ಅಮೆರಿಕಕ್ಕೆ ತಿಳಿಸಿದೆ. 1998-2004ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಂದಿನ ಮಾಹಿತಿ ಪ್ರಸಾರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಈ ವಿಷಯವನ್ನು ಪಾಕಿಸ್ತಾನದ ಮಾಧ್ಯಮಗಳಲ್ಲಿ ಈ ವಿಷಯವನ್ನು ಬಹಳ ಬಲವಾಗಿ ಪ್ರತಿಪಾದಿಸಿದರು. ಮಂಗಳವಾರ ರಾತ್ರಿ ಸುಷ್ಮಾ ಸ್ವರಾಜ್ ಅವರ ನಿಧನದ ನಂತರ, ಆ ಸಂದರ್ಶನವು ಮತ್ತೆ ಮುಖ್ಯಾಂಶಗಳಲ್ಲಿದೆ.
ಮಾರ್ಚ್ 8, 2002 ರಂದು ಪಿಟಿವಿಗೆ ನೀಡಿದ ಸಂದರ್ಶನದಲ್ಲಿ, ಸುಷ್ಮಾ ಸ್ವರಾಜ್, "ಹಿಂದೂಸ್ತಾನ್ ಮತ್ತು ಪಾಕಿಸ್ತಾನಗಳು ಕುಳಿತು ದ್ವಿಪಕ್ಷೀಯ ಮಾತುಕತೆ ಮೂಲಕ ನಮ್ಮ ಸಂಬಂದವನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ನಡುವೆ ಯಾರ ಮಧ್ಯಸ್ಥಿಕೆ ಅಗತ್ಯವಿಲ್ಲ" ಎಂದು ಹೇಳಿದರು. ನಾವು ನಮ್ಮ ಸಮಸ್ಯೆಗಳನ್ನು ನಮ್ಮ ನಡುವೆಯೇ ಪರಿಹರಿಸುತ್ತೇವೆ. ಒಬ್ಬರಿಗೊಬ್ಬರು ಮಾತನಾಡುವ ಮೂಲಕ, ನಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯ. ಆಗ ಮೂರನೆಯವರ ಅಗತ್ಯ ಇರುವುದಿಲ್ಲ. ಇಬ್ಬರೂ ಪರಸ್ಪರರ ವಿಷಯಗಳಿಗೆ ನ್ಯಾಯಾಧೀಶರಾಗುತ್ತಾರೆ" ಎಂಬುದನ್ನು ಒತ್ತಿ ಹೇಳಿದ್ದರು.
ಆ ಸಂದರ್ಶನದಲ್ಲಿ, "ನೀವು (ಪಾಕಿಸ್ತಾನ) ಈ ಕೆಲಸಕ್ಕೆ ಒಪ್ಪಿದರೆ ಉಭಯ ದೇಶಗಳ ನಡುವೆ ಶಾಂತಿಯುತ ಮಾತುಕತೆ ನಡೆಯಲಿದೆ" ಎಂದು ಅವರು ಹೇಳಿದರು. ನೀವು(ಪಾಕಿಸ್ತಾನ) ಅದಕ್ಕೆ ಸಮ್ಮತಿಸಿದರೆ ಭಾರತ-ಪಾಕಿಸ್ತಾನ ನಡುವೆ ಮಾತಕತೆ ನಡೆಯುತ್ತದೆ. ಅದೇ ರೀತಿ, ನೀವು ನಮಗೆ ಅದನ್ನು ಮಾಡಿ ಇದನ್ನು ಮಾಡಿ ಎಂದು ಹೇಳಿದರೆ, ಕಂಡಿತ ನಾವದಕ್ಕೆ ಪ್ರತಿಕ್ರಿಯಿಸುತ್ತೇವೆ. ಆಗ ನೀವು ಹೇಳಿದ್ದನ್ನು ನಾವು ಮಾಡಿದ್ದೇವೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ತಿಳಿಯುತ್ತದೆ. ಹಿಂದೂಸ್ತಾನ್ ಮತ್ತು ಪಾಕಿಸ್ತಾನದ ವಿಷಯಗಳ ಬಗ್ಗೆ ಮೂರನೇ ನ್ಯಾಯಾಧೀಶರು ಇರುವುದಿಲ್ಲ, ಅದನ್ನು ನಾವು ಸಹ ನಿರ್ಧರಿಸುತ್ತೇವೆ" ಎಂದಿದ್ದರು.