ನವದೆಹಲಿ: ಜಮ್ಮು ಕಾಶ್ಮೀರ ಪೊಲೀಸರು ಜಮ್ಮು – ಪೂಂಚ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಡಲಾಗಿದ್ದ ಸುಧಾರಿತ ಸ್ಫೋಟಕವನ್ನು (ಐಇಡಿ) ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದು ಇದರಿಂದ ನಡೆಯಬೇಕಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.



COMMERCIAL BREAK
SCROLL TO CONTINUE READING

ಕಲ್ಲರ್ ಸಮೀಪದ ಐಇಡಿಯನ್ನು ಸ್ಫೋಟಿಸಲು ಭಯೋತ್ಪಾದಕರು ಯೋಜಿಸಿದ್ದಾರೆಂದು ವರದಿಯಾಗಿದೆ. ರಾಜ್ಯದ ರಾಜೌರಿ ಜಿಲ್ಲೆಯಲ್ಲಿ, ಸುಧಾರಿತ ಸ್ಫೋಟಕ ಸಾಧನದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಜಮ್ಮು ಪೂಂಚ್ ಹೆದ್ದಾರಿಯಲ್ಲಿ ಸುಮಾರು ಒಂದು ತಾಸಿಗೂ ಅಧಿಕ ಸಮಯ ವಾಹನಗಳನ್ನು ತಡೆಹಿಡಿಡು ಪರಿಶೀಲನೆ ನಡೆಸಿದರು. 


ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಪಡೆಗಳ ಸಹಯೋಗದೊಂದಿಗೆ ಬಾಂಬು ನಿರೋಧಕ ತಂಡವು ಈ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಿದೆ. 


ಎಲ್ಒಸಿ((LoC) ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ:
ಇದಲ್ಲದೆ, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ, ಪಾಕಿಸ್ತಾನದ ಸೈನ್ಯವು LoC (LoC) ಬಳಿ ಮತ್ತೊಮ್ಮೆ ಕದನ ವಿರಾಮವನ್ನು ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ಮೂಲಕ ಉಲ್ಲಂಘಿಸಿದೆ, ಇದರಲ್ಲಿ  ಹದಿಹರೆಯದ ಓರ್ವ ವ್ಯಕ್ತಿಗೆ ಗಾಯವಾಗಿದೆ. 


ಮೊಹಮ್ಮದ್ ಇಶಾಕ್ (18) ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಮೊಹಮ್ಮದ್ ಇಶಾಕ್ ಪೋಖೇರಿಯಾ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ, ಗಾಯಗೊಂಡ ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಆತನ ಸ್ಥಿತಿಯು ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 


ಮಧ್ಯರಾತ್ರಿಯಲ್ಲಿ, ನೌಶೆರಾ ಪ್ರದೇಶದಲ್ಲಿ LoC ನ ಉದ್ದಗಲಕ್ಕೂ ಗುಂಡಿನ ದಾಳಿ ನಡೆಸಿದ್ದು ಭಾರತೀಯ ಸೇನೆಯು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.