ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ 'ಸ್ವಚ್ ಭಾರತ್' ಯೋಜನೆಯನ್ನು "ಟೊಳ್ಳು ಘೋಷಣೆ" ಎಂದು ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ಇತ್ತಿಚೆಗೆ ಒಳಚರಂಡಿಯಲ್ಲಿ ಸಂಭವಿಸಿದ ಸಾವನ್ನು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸುತ್ತಾ ಮೋದಿ ಸರಕಾರದ ಸ್ವಚ್ಛ ಭಾರತ ಯೋಜನೆ ಬರಿ ಟೊಳ್ಳು ಘೋಷಣೆ ಎಂದು ಕಿಡಿಕಾರಿದ್ದಾರೆ.



ದೆಹಲಿಯ ಚರಂಡಿಗಳಲ್ಲಿ ಅನಿಲ್ ನ ಸಾವು ಮತ್ತು ದುಃಖಿಸುತ್ತಿರುವ ಆತನ ಮಗನ ಛಾಯಾಚಿತ್ರಗಳು ವಿಶ್ವದಾದ್ಯಂತ ಹೆಡ್ ಲೈನ್ ಸುದ್ದಿ ಮಾಡಿವೆ. ನಮ್ಮ ಪ್ರಧಾನ ಮಂತ್ರಿಗಳ  ನ" ಸ್ವಚ್ ಭಾರತ್ "ಒಂದು ಟೊಳ್ಳು ಘೋಷಣೆಯಾಗಿದೆ, ಶೌಚಾಲಯಗಳು ಮತ್ತು ಒಳಚರಂಡಿಗಳಲ್ಲಿ ಸಾವಿರಾರು ಪೌರಕಾರ್ಮಿಕರು ಅಮಾನವೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ಆದರೆ ಪ್ರಧಾನಿಗಳು ಕಿವುಡರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.



ಸೆಪ್ಟೆಂಬರ್ 14 ರಂದು ದಾಬಿರಿಯಲ್ಲಿ ದೆಹಲಿ ಜಲ್ ಬೋರ್ಡ್ ಒಳಚರಂಡಿಯನ್ನು ಶುಚಿಗೊಳಿಸುವಾಗ ಸಂದರ್ಭದಲ್ಲಿ ಕೆಲಸಗಾರನೋಬ್ಬನು ಉಸಿರಾಟದ ಕಾರಣದಿಂದ ತನ್ನ ಜೀವವನ್ನು ಕಳೆದುಕೊಂಡಿದ್ದನು.ಇದಕ್ಕೂ ಮೊದಲು ಸೆಪ್ಟೆಂಬರ್ 9 ರಂದು ಮೋತಿ ನಗರ ಪ್ರದೇಶದ ಒಳಚರಂಡಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿಷಕಾರಿ ಅನಿಲದಿಂದ ಉಸಿರುಗಟ್ಟಿ ಐದು ಸ್ವಚ್ಛತಾ ಕಾರ್ಮಿಕರು ಸಾವನ್ನಪ್ಪಿದ್ದರು.