ನವದೆಹಲಿ: ಚೀನಾದಲ್ಲಿ ಪಸರಿಸಿರುವ ಕೊರೊನಾ ವೈರಸ್ ಇದೀಗ ಭಾರತದ ಕದ ತಟ್ಟಿದೆ. ಇಂತಹುದರಲ್ಲಿ ಕೊರೊನಾ ವೈರಸ್ ಗೆ ಸಂಬಂಧಸಿದಂತೆ ಜನರಲ್ಲಿ ಆತಂಕ ಮನೆಮಾಡಿದೆ. ಏರ್ಪೋರ್ಟ್ ನಿಂದ ಹಿಡಿದು ಶಾಲೆಗಳವರೆಗೆ ಮತ್ತು ಆಸ್ಪತ್ರೆಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳವರೆಗೆ ಜನರು ಈ ವೈರಸ್ ನಿಂದ ಪಾರಾಗಲು ಉಪಾಯ ಮಾಡಲು ಮುಂದಾಗುತ್ತಿದ್ದಾರೆ. ಈ ಮಧ್ಯೆ ಆಯುರ್ವೇದದಲ್ಲಿ ಈ ವೈರಸ್ ನಿಂದ ಪಾರಾಗಲು ಯಾವ ಉಪಾಯಗಳಿವೆ ಹಾಗೂ ಯೋಗದ ಮೂಲಕ ನಾವು ಈ ಮಾರಕ ವೈರಸ್ ನ ಆತಂಕದಿಂದ ಪಾರಾಗಬಹುದೇ? ನಮ್ಮ ಸಹಯೋಗಿ ವೆಬ್ಸೈಟ್ ZEE NEWS ಈ ಪ್ರಶ್ನೆಗಳನ್ನು ಯೋಗಗುರು ಬಾಬಾ ರಾಮದೇವ್ ಅವರಿಗೆ ಕೇಳಿದೆ.


COMMERCIAL BREAK
SCROLL TO CONTINUE READING

ಕೊರೊನಾ ವೈರಸ್ ಕುರಿತು ಆತಂಕಕ್ಕೆ ಒಳಗಾಗಬೇಡಿ
ಈ ಕುರಿತು ಮಾತನಾಡಿರುವ ಯೋಗಗುರು ಬಾಬಾ ರಾಮದೇವ್, ಕೊರೊನಾ ವೈರಸ್ ಕುರಿತು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.ಯಾವುದೇ ಸೊಳ್ಳೆ ಅಥವಾ ಮಾಲಿನ್ಯದಿಂದ ಈ ರೋಗ ಹರಡುವುದಿಲ್ಲ. ಈ ವೈರಸ್ ಗೆ ತುತ್ತಾಗಿರುವ ದೇಶದಿಂದ ಭಾರತಕ್ಕೆ ಆಗಮಿಸುವ ಜನರಿಂದ ದೂರವಿರುವ ಅವಶ್ಯಕತೆ ಇದೆ. ಆದರೆ, ನಿಮ್ಮ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ಸೂಚಿಸಿರುವ ಉಪಾಯಗಳನ್ನು ಮಾಡಬೇಕು ಮತ್ತು ರೋಗಪ್ರತಿರೋಧಕ ಶಕ್ತಿ ಹೆಚ್ಚಾಗಲೂ ಕೂಡ ಯೋಗಾಭ್ಯಾಸ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.


ಯೋಗದಿಂದ ಹೆಚ್ಚಾಗಲಿದೆ ರೋಗಪ್ರತಿರೋಧ ಶಕ್ತಿ
ಇದರಿಂದ ಪಾರಾಗಲು ಕೇವಲ ಕಷಾಯ ಸೇವನೆ ಮಾಡಿ, ಯೋಗಾಬ್ಯಾಸ ಮುಂದುವರೆಸಬೇಕು ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಕಪಾಲಭಾತಿ, ಅನುಲೋಮ-ವಿಲೋಮ, ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ನಿಮ್ಮ ಇಮ್ಯೂನಿಟಿಯಲ್ಲಿ ವೃದ್ಧಿಯಾಗಲಿದೆ ಎಂದು ರಾಮದೇವ್ ಹೇಳಿದ್ದಾರೆ.


ಭಾರತದಲ್ಲಿ ಇದುವರೆಗೆ 6 ಪ್ರಕರಣಗಳು ಬೆಳಕಿಗೆ ಬಂದಿವೆ
ಭಾರತದಲ್ಲಿ ಇದುವರೆಗೆ ಸುಮಾರು ಆರು ಜನರಿಗೆ ಈ ರೋಗದ ಸೋಂಕು ತಗುಲಿದೆ. ಇಂದು ಕೊರೊನಾ ವೈರಸ್ ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಗ್ರಾದಲ್ಲಿ ಒಟ್ಟು 6 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳ ಸ್ಯಾಂಪಲ್ ಅನ್ನು ತಪಾಸಣೆಗೆ ಕಳುಹಿಸಲಾಗಿದೆ. ಇತ್ತ ಇನ್ನೊಂದೆಡೆ ಕೊರೊನಾ ವೈರಸ್ ಭೀತಿಯ ಹಿನ್ನೆಲೆ ನಾಲ್ಕು ಶಾಲೆಗಳು ಬಂದ್ ಮಾಡಲಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಒಟ್ಟು 19 ಸರ್ಕಾರಿ ಹಾಗೂ 6 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ನ ಶಂಕಿತರ ತಪಾಸಣೆಗೆ ಪ್ರತ್ಯೇಕ ವಾರ್ಡ್ ಗಳನ್ನು ನಿರ್ಮಿಸಲಾಗಿದೆ.


ವಿಶ್ವಾದ್ಯಂತ ಸುಮಾರು 70 ದೇಶಗಳಲ್ಲಿನ ಜನರು ಕೊರೊನಾ ವೈರಸ್ ನ ಪ್ರಭಾವಕ್ಕೆ ಒಳಗಾಗಿದ್ದಾರೆ. ಚೀನಾದಲ್ಲಿ ಇದುವರೆಗೆ ಈ ಮಾರಕ ವೈರಸ್ ನ ದಾಳಿಗೆ ಸುಮಾರು 2945 ಮಂದಿ ಬಲಿಯಾಗಿದ್ದಾರೆ. ಈ ವೈರಸ್ ಜಾನುವಾರುಗಳಿಂದ ಪಸರಿಸಿದೆ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ. ಅಮೃತಬಳ್ಳಿ ಇದಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಅವರು ಹೇಳಿದ್ದಾರೆ. ಸಂಪೂರ್ಣ ಕುಟುಂಬಸ್ಥರು ಅಮೃತಬಳ್ಳಿ ನೀರನ್ನು ಸೇವಿಸಬೇಕು. ಈ ನೀರಿನ ಸೇವನೆ ಮಾಡಿ ನಾವು ಕೊರೊನಾ ವೈರಸ್ ನಿಂದ ಪಾರಾಗಬಹುದು. ಅಮೃತಬಳ್ಳಿಯ ನೀರು ಸೇವನೆ ಶೀತ ಮತ್ತು ಕೆಮ್ಮಿನ ಲಕ್ಷಣಗಳಿದ ದೂರವಿರಬಹುದು. ಅಮೃತಬಳ್ಳಿಯಿಂದ ನಾವು ಹಲವು ರೋಗಗಳಿಂದ ಪರಿಹಾರ ಕಂಡುಕೊಂಡಿದ್ದೇವೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.