ನವದೆಹಲಿ: ಉತ್ತರ ಪ್ರದೇಶ ಕಾನೂನು ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ್ ಅವರನ್ನು14 ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಇನ್ನೊಂದೆಡೆ ಸುಲಿಗೆ ಆರೋಪದಡಿ ಇತರ ಮೂವರನ್ನು ಸಹ ಬಂಧಿಸಲಾಗಿದೆ ಎಂದು ಮೊರಾದಾಬಾದ್ ಡಿಜಿಪಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಪ್ರತಿಕ್ರಿಯಿಸಿದ ಅವರು ಬಂಧನದ ವಿಚಾರದಲ್ಲಿ ಯಾವುದೇ ವಿಳಂಬವಾಗಿಲ್ಲ, ವೀಡಿಯೊದ ವಿಧಿವಿಜ್ಞಾನ ತನಿಖೆಯ ನಂತರ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಶುಕ್ರವಾರದಂದು 73 ವರ್ಷದ ಬಿಜೆಪಿ ನಾಯಕನನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ವಿಶೇಷ ತನಿಖಾ ತಂಡ ಬಂಧಿಸಿತ್ತು.


ಉತ್ತರ ಪ್ರದೇಶದ ಶಹಜಹಾನ್ಪುರದ ಸ್ವಾಮಿ ಶುಕ್ರದೇವಾನಂದ್ ಕಾನೂನು ಕಾಲೇಜಿನ ಮಹಿಳಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಎದೆಯ ನೋವೆಂದು ಹೇಳಿದ ನಂತರ ಚಿನ್ಮಯಾನಂದ್ ಅವರ ಸ್ವಂತ ಆಶ್ರಮದಲ್ಲಿ ವೈದ್ಯರ ತಂಡದಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರು ಸೆಪ್ಟೆಂಬರ್ 13 ರಿಂದ ಗೃಹ ಬಂಧನದಲ್ಲಿದ್ದಾರೆ.


ಸಾಮಾಜಿಕ ಮಾಧ್ಯಮದಲ್ಲಿ ಸಂತ್ರಸ್ತ ಮಹಿಳೆ ತಮಗೆ ನ್ಯಾಯ ಸಿಗಬೇಕೆಂದು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದರು. ಇದಾದ ನಂತರ ಅವರು ಏಕಾಏಕಿ ನಾಪತ್ತೆಯಾಗಿದ್ದರು, ನಂತರ ರಾಜಸ್ತಾನದ ಪೋಲಿಸರು ಅವರನ್ನು ಜೈಪುರಿನಲ್ಲಿ ಪತ್ತೆ ಹಚ್ಚಿದರು. ಆಗ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಕೆ ಜೀವ ಬೆದರಿಕೆ ಭಯದಿಂದಾಗಿ ಪೋಷಕರ ಬಳಿಹೋಗಲು ನಿರಾಕರಿಸಿದ ಹಿನ್ನಲೆಯಲ್ಲಿ ಆಕೆಯನ್ನು ಎಐಡಬ್ಲ್ಯೂಸಿ ಹಾಸ್ಟೆಲ್ ನಲ್ಲಿ ತಂಗುವುದಕ್ಕೆ ವ್ಯವಸ್ಥೆ ಮಾಡಲಾಯಿತು. ಸುರ್ಪ್ರೀಂಕೋರ್ಟ್ ಕೂಡ ಆಕೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿತು.