ತಿರುವನಂತಪುರಂ: ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಪಿಐಎಂನ ಹಲವು ಮಾಜಿ ಸಚಿವರು ನನ್ನಿಂದ ‘ಲೈಂಗಿಕ ಸಹಕಾರ’ ಕೋರಿದ್ದರು ಎಂದು ಅವರು ಆರೋಪಿಸಿದ್ದಾರೆ. ಸ್ವಪ್ನಾರ ಇತ್ತೀಚಿನ ಆರೋಪಗಳು ಕೇರಳದಲ್ಲಿ ಹೊಸ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.


COMMERCIAL BREAK
SCROLL TO CONTINUE READING

ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮೂವರು ಪ್ರಮುಖ ನಾಯಕರ ವಿರುದ್ಧ ಸ್ವಪ್ನಾ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌, ಕೇರಳ ವಿಧಾನಸಭಾ ಮಾಜಿ ಸ್ಪೀಕರ್‌ ಪಿ.ಶ್ರೀರಾಮಕೃಷ್ಣನ್‌ ಮತ್ತು ಮಾಜಿ ಹಣಕಾಸು ಸಚಿವ ಡಾ.ಥಾಮಸ್‌ ಐಸಾಕ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಅಂತಾ ಸ್ವಪ್ನಾ ಆರೋಪಿಸಿದ್ದಾರೆ.


ಇದನ್ನೂ ಓದಿ: ಬುದ್ದಿ ತೋರಿದ ಭಾರತೀಯರು : ಗೂಗಲ್‌ನಲ್ಲಿ ಹೆಚ್ಚಿತು ರಿಷಿ ಸುನಕ್‌ ಜಾತಿ ಹುಡಕಾಟ..!


ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ನೀಡಿರುವ ಸ್ವಪ್ನಾ, ಕಮ್ಯುನಿಸ್ಟ್ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾನು ತಿರುವನಂತಪುರಂನ ಯುಎಇ ಕಾನ್ಸುಲ್‌ ಜನರಲ್‌ನ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಈ ಮೂವರು ನಾಯಕರು ಪಿಣರಾಯಿ ವಿಜಯನ್‌ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಸಚಿವರಾಗಿದ್ದರು. ಆಗ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಸುರೇಂದ್ರನ್‌ ಮತ್ತು ಶ್ರೀರಾಮಕೃಷ್ಣನ್‌ ನನ್ನ ಮೇಲೆ ಒತ್ತಡ ಹೇರಿದ್ದರು. ಫೋನ್‌ನಲ್ಲಿ ಮಾತನಾಡುವಾಗ ಮತ್ತು ಮುಖಾಮುಖಿಯಾದಾಗಲೂ ನನ್ನೊಂದಿಗೆ ಆಕ್ಷೇಪಾರ್ಹವಾಗಿ ವರ್ತಿಸಿದ್ದರು. ಥಾಮಸ್‌ ಪರೋಕ್ಷವಾಗಿಯೇ ನನ್ನಿಂದ ಲೈಂಗಿಕ ಸಹಕಾರ ಕೋರಿದ್ದರು. ಇವರೆಲ್ಲರೂ ನೈತಿಕತೆ ಇಲ್ಲದ ವ್ಯಕ್ತಿಗಳು’ ಅಂತಾ ಸ್ವಪ್ನಾ ಆಕ್ರೋಶ ಹೊರಹಾಕಿದ್ದಾರೆ.  


ಸ್ವಪ್ನಾರ ಈ ಆರೋಪವನ್ನು ಆಡಳಿತಾರೂಢ ಎಲ್‌ಡಿಎಫ್ ಸರ್ಕಾರ ತಿರಸ್ಕರಿಸಿದೆ. ‘ಎಡಪಕ್ಷವು ಯಾವತ್ತೂ ತನ್ನ ಸದಸ್ಯರನ್ನು ರಕ್ಷಿಸಲು ಯತ್ನಿಸುತ್ತದೆ ಎಂದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಆರೋಪಿಸಿದೆ. ಸಿಪಿಐ(M) ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿಗಳು ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾರ ಹೊಸ ಆರೋಪಗಳು ಆಧಾರರಹಿತ ಎಂದು ಹೇಳಿದ್ದಾರೆ. ಅವರ ಪ್ರತಿ ಆರೋಪಕ್ಕೂ ಉತ್ತರ ನೀಡುವ ಅಗತ್ಯವಿಲ್ಲ, ಈ ಹಿಂದೆಯೂ ಅವರು ಇದೇ ರೀತಿಯ ಆರೋಪ ಮಾಡುತ್ತಿದ್ದರು. ಅದರ ಮುಂದುವರಿದ ಭಾಗವೇ ಇದಾಗಿದೆ ಎಂದು ಸಿಪಿಐ(M) ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಹೇಳಿದ್ದಾರೆ.


ಇದನ್ನೂ ಓದಿ: PM Kisan: ದೀಪಾವಳಿ ನಂತರ ರೈತರಿಗೆ ಸಿಹಿಸುದ್ದಿ! ನವೆಂಬರ್ 30ರೊಳಗೆ ಇಷ್ಟು ಹಣ ಖಾತೆಗೆ ಬರಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ