ಉತ್ತರಾಖಂಡ್`ನಲ್ಲಿ ಹಂದಿ ಜ್ವರದ ಭೀತಿ, ಈವರೆಗೆ ಏಳು ಜನರ ಸಾವು
ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಎಲ್ಲಾ ಆಸ್ಪತ್ರೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆಡಳಿತ ಸೂಚಿಸಿದೆ.
ಡೆಹ್ರಾಡೂನ್: ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ನಲ್ಲಿ ಹಂದಿ ಜ್ವರದ ಭೀತಿ ಮುಂದುವರೆದಿದೆ. ಹಂದಿ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಈವರೆಗೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ, ಮಂಗಳವಾರ ಪಟೇಲ್ ನರದಲ್ಲಿರುವ ಶ್ರೀಮಹಂತ್ ಇಂದಿರೇಶ್ ಆಸ್ಪತ್ರೆಯಲ್ಲಿ ಮೋಹಕಂಪುರ್ ನಿವಾಸಿ ಮಹಿಳೆ ಮಾರಿಜ್ ಎಂಬುವವರು ಮೃತಪಟ್ಟಿದ್ದಾರೆ. ಈ ಆಸ್ಪತ್ರೆಯಲ್ಲಿ ಕಳೆದ ಮೂರು ದಿನದಿಂದ ಹಂದಿ ಜ್ವರಕ್ಕೆ ತುತ್ತಾಗಿ ಮೃತಪಟ್ಟವರಲ್ಲಿ ಇವರು ನಾಲ್ಕನೇಯವರು.
ಮಾಹಿತಿ ಪ್ರಕಾರ, ನೆಹರೂ ಕಾಲೋನಿ ನಿವಾಸಿ 71 ವರ್ಷದ ಮಹಿಳೆಯೊಬ್ಬರನ್ನು ಕೈಲಾಶ್ ಆಸ್ಪತ್ರೆಯಿಂದ ಜನವರಿ 5ರಂದು ಶ್ರೀಮಹಂತ್ ಇಂದಿರೇಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಜನವರಿ 13ರಂದು ಅವರ ಆರೋಗ್ಯ ಗಂಭೀರ ಸ್ಥಿತಿ ತಲುಪಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ.
ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಎಸ್.ಕೆ. ಗುಪ್ತಾ ಅವರು ಇನ್ನೂ ಓರ್ವ ರೋಗಿಗೆ ಶ್ರೀಮಹಂತ್ ಇಂದಿರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದರು. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಎಲ್ಲಾ ಆಸ್ಪತ್ರೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆಡಳಿತ ಸೂಚಿಸಿದೆ.
ಹಂದಿ ಜ್ವರ ಎಂದರೇನು?
ಹಂದಿ ಜ್ವರ ಒಂದು ಮಾರಕ ವೈರಸ್, ಇದು ಹಂದಿಗಳ ಮೂಲಕ ಹರಡುತ್ತದೆ. ಮೆಕ್ಸಿಕೋದ ವೆರಾಕ್ರಜ್ ಪ್ರದೇಶದಲ್ಲಿ ಒಂದು ಹಂದಿ ಫಾರ್ಮ್ ಸಮೀಪ ವಾಸಿಸುವ ಜನರಲ್ಲಿ ಈ ರೋಗದ ಲಕ್ಷಣಗಳು ಮೊದಲ ಬಾರಿಗೆ ಕಂಡುಬಂದಿವೆ. ಸ್ವಿಂಗ್ ಫ್ಲೂ ಅನ್ನು ಹಂದಿ ಜ್ವರ ಎಂದು ಕರೆಯಲಾಗುತ್ತದೆ. ಈ ರೋಗವು ಶೀತಕ್ಕೆ ಸಂಬಂಧಿಸಿದ ವೈರಸ್ ಅನ್ನು ಉಂಟುಮಾಡುತ್ತದೆ. ಈ ವೈರಸ್ಗಳು ಸರಿಸುಮಾರಾಗಿ ನಾಲ್ಕು ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. H1N1, H1N2, H3N2 ಮತ್ತು H3N1. ಇವುಗಳಲ್ಲಿ, H1N1 ಅತ್ಯಂತ ಅಪಾಯಕಾರಿ.
ಹಂದಿ ಜ್ವರದ ಲಕ್ಷಣ:
ಹಂದಿ ಜ್ವರ ಸಾಮಾನ್ಯವಾಗಿ ಜ್ವರದ ಲಕ್ಷಣಗಳನ್ನು ಹೋಲುತ್ತವೆ. ಜ್ವರ, ತಲೆನೋವು, ಸುಸ್ತು, ಹಸಿವು ಮತ್ತು ಕೆಮ್ಮು. ಕೆಲವರಲ್ಲಿ ತೀವ್ರ ವಾಂತಿ-ಭೇದಿ ಕೂಡ ಕಾಣಿಸಿಕೊಳ್ಳುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಅದು ವ್ಯಕ್ತಿಯ ಮರಣಕ್ಕೆ ಕಾರಣವಾಗುತ್ತದೆ.