ನವದೆಹಲಿ: ತಾಜ್ ಮಹಲ್ ಶೀಘ್ರದಲ್ಲೇ ರಾಮ್ ಮಹಲ್ ಎಂದು ಮರುನಾಮಕರಣಗೊಳ್ಳಲಿದೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಶಾಸಕ ಬರಿಯಾ ಸುರೇಂದ್ರ ಸಿಂಗ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಾಧ್ಯಮದ ಜೊತೆಗೆ ಮಾತನಾಡಿದ ಸುರೇಂದ್ರ ಸಿಂಗ್ ತಾಜ್ (Surendra Singh) ಮಹಲ್ ಈ ಹಿಂದೆ ಶಿವನ ದೇವಸ್ಥಾನವಾಗಿತ್ತು ಎಂದು ಹೇಳಿದ್ದಾರೆ.ಈಗ ಶೀಘ್ರದಲ್ಲೇ ಯೋಗಿ ಆಡಳಿತದಲ್ಲಿ ತಾಜ್ ಮಹಲ್ ಶಿವ ದೇವಸ್ಥಾನ ಎಂದು ಮರು ನಾಮಕರಣ ಮಾಡಲಿದ್ದಾರೆ ಎಂದು ಹೇಳಿದ್ದಾರೆ.ಇನ್ನೂ ಮುಂದುವರೆದು ಮಾತನಾಡಿದ ಸುರೇಂದ್ರ ಸಿಂಗ್ ಸಿಎಂ ಯೋಗಿ ಆದಿತ್ಯನಾಥ್ ಅವರು ಶಿವಾಜಿ ವಂಶಸ್ಥರಾಗಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಹೆಣ್ಣು ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಅತ್ಯಾಚಾರವನ್ನು ತಡೆಗಟ್ಟಬಹುದು- ಬಿಜೆಪಿ ಶಾಸಕ ಸುರೇಂದ್ರ ಸಿಂಗ್


'ಶಿವಾಜಿಯ ವಂಶಸ್ಥರು ಈ ಹಿಂದೆ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು.ಇದೂ ಒಂದು ರೀತಿ ಸಮರ್ಥ ಗುರು ಶಿವಾಜಿಯನ್ನು ಭಾರತಕ್ಕೆ ನೀಡಿದಂತೆಯೇ,ಗೋರಖನಾಥ ಜಿ ಅವರು ಯೋಗಿ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶಕ್ಕೆ ಸಿಕ್ಕಿರುವಂತಹ ವರದಾನ ಎಂದು ಸಿಂಗ್ ಹೇಳಿದರು.


ಇದನ್ನೂ ಓದಿ: ಮೀಸಲಾತಿ, ಎಸ್ಸಿ/ಎಸ್ಟಿ ಕಾಯ್ದೆ ಜಾತಿ ಪದ್ಧತಿಯನ್ನು ಜೀವಂತವಾಗಿರಿಸಿದೆ- ಬಿಜೆಪಿ ಶಾಸಕ


ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಇತರ 20 ಪಕ್ಷದ ಕಾರ್ಯಕರ್ತರ ವಿರುದ್ಧ ಶನಿವಾರ (ಮಾರ್ಚ್ 13) ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರಿಗೆ ತೀವ್ರ ಗಾಯಗಳಾಗಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.