Tamil Nadu Assembly Elections : ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆ ಶುಕ್ರವಾರ ತಮಿಳುನಾಡು ವಿಧಾನಸಭಾ ಚುನಾವಣೆ 2021 (Tamil Nadu Assembly Elections)ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 6 ಹೆಸರುಗಳ ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ಸೆಲ್ವಂ ಅವರ ಹೆಸರುಗಳೂ ಸೇರಿವೆ.


COMMERCIAL BREAK
SCROLL TO CONTINUE READING

ಎಐಎಡಿಎಂಕೆ ವಿಧಾನಸಭಾ ಚುನಾವಣೆಗೆ ಆರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ (Edappadi K Palaniswami) ಅವರನ್ನು ಎಡಪ್ಪಾಡಿ (Edappad)  ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಡಿಸಿಎಂ ಪನ್ನೀರ್ ಸೆಲ್ವಂ ಬೋಡಿನಾಯಕನೂರ್ (Bodinayakanur) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ  ಸ್ಪರ್ಧಿಸಲಿದ್ದಾರೆ.


ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಮಾಸ್ಟರ್ ಸ್ಟ್ರೋಕ್..! ಈ ಸಲ ಅರಳುತ್ತಾ ಕಮಲ..?


ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಸ್ಥಾನಗಳಿದ್ದು, ಇದರ ಅವಧಿ ಮೇ 24 ರಂದು ಪೂರ್ಣಗೊಳ್ಳುತ್ತಿದೆ. ತಮಿಳುನಾಡಿನಲ್ಲಿ ಕಳೆದ 10 ವರ್ಷಗಳಿಂದ ಅಖಿಲ ಭಾರತ ಅನ್ನ ದ್ರಾವಿಡ ಮುನ್ನೇತ್ರ ಕಡಗಂ (AIADMK) ಆಡಳಿತ ನಡೆಸುತ್ತಿದೆ. 


ಇದನ್ನೂ ಓದಿ - ವಿಧಾನಸಭೆಯಲ್ಲೂ ಬಿಜೆಪಿ ಜೊತೆಗಿನ ಎಐಎಡಿಎಂಕೆ ಮೈತ್ರಿ ಮುಂದುವರೆಯಲಿದೆ- ತಮಿಳುನಾಡು ಸಿಎಂ ಪಳನಿಸ್ವಾಮಿ


2016 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರನ್ನು ಸಿಂಹಾಸನಕ್ಕೆ ಮರು ನಿಯೋಜಿಸಿದರು. ಈ ಚುನಾವಣೆಯಲ್ಲಿ ಎಐಎಡಿಎಂಕೆ 135 ಸ್ಥಾನಗಳನ್ನು ಗೆದ್ದರೆ, ದ್ರಾವಿಡ ಮುನ್ನೇತ್ರ ಕಡಗಂ (ಡಿಎಂಕೆ) 88 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿಯ ಖಾತೆಯನ್ನೂ ತೆರೆಯಲಾಗಲಿಲ್ಲ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಒಕ್ಕೂಟವನ್ನು ರಚಿಸಿದ್ದು, ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಸ್ಪರ್ಧಿಸಲಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.