ಚೆನ್ನೈ:  ಚೆನ್ನೈನ ಮರೀನಾ ಬೀಚ್‌(Marina Beach)ನಲ್ಲಿರುವ ಕಾಮರಾಜರ್ ಸಲಾಯ್‌ನಲ್ಲಿ ಮಾಜಿ ಸಿಎಂ ಹಾಗೂ ಡಿಎಂಕೆ ಪರಮೋಚ್ಛ ನಾಯಕ ದಿವಂಗತ ಎಂ.ಕರುಣಾನಿಧಿ(M Karunanidhi)ಯವರ ಸ್ಮಾರಕ ತಲೆ ಎತ್ತಲಿದೆ. ಆಧುನಿಕ ತಮಿಳುನಾಡು ನಿರ್ಮಾಣಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ 39 ಕೋಟಿ ರೂ.ವೆಚ್ಚದಲ್ಲಿ ಕರುಣಾನಿಧಿಯವರ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಮಂಗಳವಾರ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್(MK Stalin) ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಸಿದ್ಧ ಕಡಲ ತೀರದಲ್ಲಿರುವ 2.21 ಎಕರೆ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಸ್ಟಾಲಿನ್ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ನಮ್ಮ ತಂದೆ, ಡಿಎಂಕೆ ಪರಮೋಚ್ಛ ನಾಯಕ ಕರುಣಾನಿಧಿಯವರು ತಮಿಳುನಾಡಿನ(Tamil Nadu Development)ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮಿಳರ ಕಲ್ಯಾಣಕ್ಕಾಗಿ ಅವರ ಕೊನೆಯ ಉಸಿರು ಇರುವವರೆಗೂ ಕೆಲಸ ಮಾಡಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.


ಇದನ್ನೂ ಓದಿ: Samsung Galaxy Z Fold3 5G ಸ್ಮಾರ್ಟ್‌ಫೋನ್ ಮೇಲೆ 7000 ರೂ.ವರೆಗೆ ಡಿಸ್ಕೌಂಟ್


39 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಈ ಸ್ಮಾರಕವು ಕರುಣಾನಿಧಿಯವರ ಜೀವನ ಮತ್ತು ಸಾಧನೆಗಳ(Karunanidhi Achievements) ಬಗ್ಗೆ ಡಿಜಿಟಲ್ ವಿಷಯವನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ. ಸಮಾಜ ಕಲ್ಯಾಣ, ಸಾರಿಗೆ, ಸಾಹಿತ್ಯ, ಶಿಕ್ಷಣ, ನಗರೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಿಗೆ ಕರುಣಾನಿಧಿಯವರು ಅಪಾರ ಕೊಡುಗೆ ನೀಡಿದ್ದಾರೆ. ಅವರು ಆಧುನಿಕ ತಮಿಳುನಾಡಿನ ಶಿಲ್ಪಿ ಎಂದು ಸ್ಟಾಲಿನ್ ಇದೇ ವೇಳೆ ಸ್ಮರಿಸಿದರು.


ಚುನಾವಣೆಯಲ್ಲಿ ಒಂದೂ ಬಾರಿಯೂ ಸೋಲು ಕಾಣದೆ ಸತತ 13 ಬಾರಿ ಗೆಲುವು ಸಾಧಿಸಿದ ಕರುಣಾನಿಧಿಯಂತಹ ನಾಯಕನನ್ನು ದೇಶ ಕಂಡಿಲ್ಲ.ತಮ್ಮ 80 ವರ್ಷಗಳ ರಾಜಕೀಯ ಜೀವನದಲ್ಲಿ ಕರುಣಾನಿಧಿಯವರು 60 ವರ್ಷಗಳ ಕಾಲ ವಿಧಾನಸಭಾ ಸದಸ್ಯರಾಗಿದ್ದರು. ನಾವೆಲ್ಲರೂ ಈಗ ನೋಡುತ್ತಿರುವ ಆಧುನಿಕ ತಮಿಳುನಾಡಿನ ಹಿಂದಿನ ವಾಸ್ತುಶಿಲ್ಪಿ ಕರುಣಾನಿಧಿಯವರು. ಅವರು ತಮಿಳುನಾಡು ಮತ್ತು ತಮಿಳು ಜನರ ಅಸ್ಮಿತೆಯಾಗಿದ್ದಾರೆಂದು ಸ್ಟಾಲಿನ್ ತಿಳಿಸಿದರು.


ಇದನ್ನೂ ಓದಿ: Jammu and Kashmi: ಸೋಪೋರ್‌ನಲ್ಲಿ ಎನ್ಕೌಂಟರ್, ಇಬ್ಬರು ಭಯೋತ್ಪಾದಕರ ಹತ್ಯೆ


ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ(CN Annadurai) ಅವರ ಸ್ಮಾರಕದ ಪಕ್ಕದಲ್ಲೇ ಕರುಣಾನಿಧಿ ಅವರ ಸ್ಮಾರಕ ನಿರ್ಮಾಣವಾಗಲಿದೆ ಅಂತಾ ಇದೇ ವೇಳೆ ತಿಳಿಸಿದರು. ಎಐಎಡಿಎಂಕೆಯ ವಿರೋಧ ಪಕ್ಷದ ನಾಯಕರು ಸ್ಟಾಲಿನ್ ಘೋಷಣೆಯನ್ನು ಪೂರ್ಣ ಹೃದಯದಿಂದ ಸ್ವಾಗತಿಸಿದರು. ಕರುಣಾನಿಧಿ ರಾಜ್ಯಕ್ಕೆ ಹಲವಾರು ಕಲ್ಯಾಣ ಯೋಜನೆಗಳನ್ನು ತಂದಿದ್ದಾರೆ ಎಂದು ಒ.ಪನ್ನೀರ್ ಸೆಲ್ವಂ ಹೇಳಿದರು. ಕರುಣಾನಿಧಿಯವರ ಸಿನಿಮಾ ಸಂಭಾಷಣೆಗಳು ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಪ್ರಗತಿಗೆ ಸಹಾಯ ಮಾಡಿದೆ ಎಂದು ಅವರು ತಿಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ