ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Election)  ಡಿಎಂಕೆ (DMK) ಜಯಗಳಿಸಿದ ನಂತರ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್,  ತಮಿಳುನಾಡು ಮುಖ್ಯಮಂತ್ರಿಯಾಗಿ (Tamil Nadu CM) ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸ್ಟಾಲಿನ್, ಕರೋನಾ ಸಂಕಷ್ಟ ಕಾಲದಲ್ಲಿ ಪರಿಹಾರ ಘೋಷಿಸಿದ್ದಾರೆ.  


COMMERCIAL BREAK
SCROLL TO CONTINUE READING

ಪಡಿತರ  ಚೀಟಿ ಹೊಂದಿರುವವರಿಗೆ ಸಿಗಲಿದೆ 2000 ರೂಪಾಯಿ :
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎಂ.ಕೆ.ಸ್ಟಾಲಿನ್ (MK Stalin) ಮೊದಲ ಆದೇಶ ಹೊರಡಿಸಿದ್ದಾರೆ. ಕರೋನಾ  ಸಾಂಕ್ರಾಮಿಕ (COVID-19) ರೋಗದಿಂದ ಬಳಲುತ್ತಿರುವ ನಾಗರಿಕರಿಗೆ ಸಹಾಯ ಮಾಡಲು ಸ್ಟಾಲಿನ್ ಸರ್ಕಾರ ಮುಂದಾಗಿದೆ.  ರೇಷನ್ ಕಾರ್ಡ್ ಹೊಂದಿರುವವರಿಗೆ ( Ration Card Holders) 4000 ರೂ. ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದರ ಅನ್ವಯ  4153.69 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ಆದೇಶಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಸಹಿ ಹಾಕಿದ್ದಾರೆ. ಅಂದರೆ, 4 ಸಾವಿರದಲ್ಲಿ ಮೊದಲ ಕಂತಿನ ರೂಪದಲ್ಲಿ 2 ಸಾವಿರ ರೂಪಾಯಿಯನ್ನು ಮೊದಲು ಬಿಡುಗಡೆಗೊಳಿಸಲಾಗುವುದು. ಈ ಮೂಲಕ, ರಾಜ್ಯದ 2 ಕೋಟಿ 7 ಲಕ್ಷ 67 ಸಾವಿರ ಪಡಿತರ ಚೀಟಿ (Ration Card) ಹೊಂದಿರುವವರು ಇದರ ಲಾಭ ಪಡೆಯಲಿದ್ದಾರೆ. 


ಇದನ್ನೂ ಓದಿ : "ಕೊರೊನಾ ವಿರುದ್ಧ ಹೋರಾಡಿ, ಪ್ರಧಾನಿ ಮೋದಿ ವಿರುದ್ಧವಲ್ಲ"


ಹಾಲಿನ ಬೆಲೆಯನ್ನು 3 ರೂಪಾಯಿಗಳವರೆಗೆ ಕಡಿತಗೊಳಿಸಿದ ಸರ್ಕಾರ : 
ಎಂ.ಕೆ. ಸ್ಟಾಲಿನ್ ಮತ್ತೊಂದು ಮಹತ್ವದ  ಆದೇಶಕ್ಕೂ ಸಹಿ ಹಾಕಿದ್ದಾರೆ. ಆವಿನ್ ಹಾಲಿನ ಬೆಲೆಯಲ್ಲಿ  (Aavin Milk Price)  ಮೂರು ರೂಪಾಯಿಗಳವರೆಗೆ ಕಡಿತಗೊಳಿಸಲಾಗಿದೆ. ಈ ಹೊಸ ದರ ಮೇ 16 ರಿಂದ ಜಾರಿಗೆ ಬರಲಿದೆ.


ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : 
ಮೇ 8 ಶನಿವಾರ, ಅಂದರೆ ನಾಳೆಯಿಂದ ರಾಜ್ಯ ಸಾರಿಗೆ ನಿಗಮವು ನಿರ್ವಹಿಸುವ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Ride for Women) ಕಲ್ಪಿಸಲಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಆದೇಶ ಹೊರಡಿಸಿದ ಎಂ.ಕೆ.ಸ್ಟಾಲಿನ್, ಖಾಸಗಿ ಆಸ್ಪತ್ರೆಗಳಲ್ಲಿ ಕೊರಾನ ವೈರಸ್ ಚಿಕಿತ್ಸೆಯನ್ನು (Corona treatment) ಸರ್ಕಾರಿ ವಿಮಾ ಯೋಜನೆಯ ವ್ಯಾಪ್ತಿಗೆ ತರುವ ಬಗ್ಗೆ ಘೋಷಿಸಿದ್ದಾರೆ. ಸಿಎಂ ಈ ನಿರ್ಧಾರದಿಂದ ಸಾವಿರಾರು ಜನರಿಗೆ ಪರಿಹಾರ ಸಿಗಲಿದೆ. 


ಇದನ್ನೂ ಓದಿ : CoronaVirus New Guidelines: ಕರೋನಾ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.