COVID-19 ನಿರ್ಬಂಧಗಳೊಂದಿಗೆ ಜಲ್ಲಿಕಟ್ಟು ಆಚರಣೆಗೆ ತಮಿಳುನಾಡು ಸರ್ಕಾರದ ಅನುಮತಿ
ಈವೆಂಟ್‌ನಲ್ಲಿ ಆಟಗಾರರ ಸಂಖ್ಯೆ 150 ಕ್ಕಿಂತ ಹೆಚ್ಚಿರಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ ಇದರಲ್ಲಿ ಭಾಗವಹಿಸುವವರಿಗೆ COVID-19 ನೆಗೆಟಿವ್ ರಿಪೋರ್ಟ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಚೆನ್ನೈ: ಕರೋನಾವೈರಸ್ ಅಟ್ಟಹಾಸದ ನಡುವೆಯೂ ಜನಪ್ರಿಯ 'ಜಲ್ಲಿಕಟ್ಟು' ಕ್ರೀಡೆಯನ್ನು ಕೆಲವು ನಿರ್ಬಂಧಗಳೊಂದಿಗೆ ನಡೆಸಲು ತಮಿಳುನಾಡು ಸರ್ಕಾರ ಬುಧವಾರ ಅನುಮತಿ ನೀಡಿದೆ. ವರದಿಗಳ ಪ್ರಕಾರ ಕೇಂದ್ರದ COVID-19 ಸುರಕ್ಷತಾ ಪ್ರೋಟೋಕಾಲ್‌ಗಳೊಂದಿಗೆ ವಾರ್ಷಿಕ ಜಲ್ಲಿಕಟ್ಟು ಕಾರ್ಯಕ್ರಮಗಳನ್ನು ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈವೆಂಟ್‌ನಲ್ಲಿ ಆಟಗಾರರ ಸಂಖ್ಯೆ 150 ಕ್ಕಿಂತ ಹೆಚ್ಚಿರಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ ಇದರಲ್ಲಿ ಭಾಗವಹಿಸುವವರಿಗೆ COVID-19 ನೆಗೆಟಿವ್ ರಿಪೋರ್ಟ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
Schools Reopen: 'ಜನವರಿ 1ರಿಂದಲೇ ರಾಜ್ಯದಲ್ಲಿ ಶಾಲೆಗಳ ಆರಂಭ ಖಚಿತ'
ಇದಲ್ಲದೆ ಜಲ್ಲಿಕಟ್ಟು (Jallikattu) ನಡೆಯುವ ಸ್ಥಳದಲ್ಲಿ ತಾಪಮಾನ ತಪಾಸಣೆ ಮತ್ತು ಮಾಸ್ಕ್ (Mask) ಧರಿಸುವುದು ಎಲ್ಲರಿಗೂ ಕಡ್ಡಾಯವಾಗಿರುತ್ತದೆ. ಜಲ್ಲಿಕಟ್ಟು ಒಂದು ವಿವಾದಿತ ಸಾಂಪ್ರದಾಯಿಕ ಆಚರಣೆಯಾಗಿದ್ದು ಇದರಲ್ಲಿ ಪುಲಿಕುಲಂ ಅಥವಾ ಕಂಗಾಯಂ ತಳಿಗಳಂತಹ ಗೂಳಿಗಳನ್ನು ಒಂದೊಂದಾಗಿ ಸ್ಪರ್ಧಿಗಳಿರುವ ನಿಗದಿತ ಜಾಗದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಹಲವರು ಭಾಗವಹಿಸಿರುತ್ತಾರೆ. ಸ್ಪರ್ಧಿಗಳು ಸಾಧ್ಯವಾದಷ್ಟು ಕಾಲ ಗೂಳಿಯ ಭುಜ ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಗೂಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಮಾಟು ಪೊಂಗಲ್ ದಿನದಂದು ಪೊಂಗಲ್ ಆಚರಣೆಯ ಅಂಗವಾಗಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಅತ್ಯಂತ ಜನಪ್ರಿಯವಾಗಿದೆ. ಇದು ವಾರ್ಷಿಕವಾಗಿ ಜನವರಿಯಲ್ಲಿ ನಡೆಯುತ್ತದೆ. ಆದಾಗ್ಯೂ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ (PETA) ಅವರ ಪ್ರತಿಭಟನೆಯ ನಂತರ ಈ ಕ್ರೀಡೆಯು ನಿಷೇಧವನ್ನು ಎದುರಿಸಿತು. ಆದಾಗ್ಯೂ 2016 ರಲ್ಲಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳ ನಂತರ ತಮಿಳುನಾಡು ಸರ್ಕಾರವು ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿತು. ಇದು ಕೇಂದ್ರದ ಅನುಮೋದನೆಯೊಂದಿಗೆ 2017 ರಿಂದ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿತು.
ಇದನ್ನೂ ಓದಿ: ಬೆಂಗಳೂರು ಒಂದರಲ್ಲೇ ಬ್ರಿಟನ್‌ನಿಂದ ಬಂದವರು 31 ಜನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.