ನವದೆಹಲಿ: ತಮಿಳುನಾಡಿನ ರಾಧಾಕೃಷ್ಣನ್ ನಗರ ಕ್ಷೇತ್ರದ ಉಪಚುನಾವಣೆ ಡಿಸೆಂಬರ್ 21 ರಂದು ನಡೆಯಲಿದ್ದು, ಡಿಸೆಂಬರ್ 24 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಅದೇ ದಿನಗಳಂದು ಉತ್ತರಪ್ರದೇಶದ ಸಿಕಂದ್ರಾ, ಪಶ್ಚಿಮ ಬಂಗಾಳದ ಸಬಂಗ್ ಮತ್ತು ಅರುಣಾಚಲ ಪ್ರದೇಶದ ಪಕ್ಕೇ-ಕಾಸಂಗ್ ಮತ್ತು ಲಿಕಾಬಲಿ ಕ್ಷೇತ್ರಗಳಲ್ಲೂ ಸಹ ಉಪಚುನಾವಣೆ ನಡೆಯಲಿದೆ. ಡಿ.4 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿ.5 ರಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಡಿ.7 ಕೊನೆಯ ದಿನವಾಗಿದೆ. 


ಈ ಹಿಂದೆ ಆರ್.ಕೆ.ನಗರ ಉಪಚುನಾವಣೆಗೆ ನಿಗದಿಗೊಂಡಿದ್ದ ದಿನಾಂಕವನ್ನು ರಾಜಕೀಯ ಪಕ್ಷಗಳು ಹಣ ಹಂಚಿದ್ದವು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಏಪ್ರಿಲ್ 10ರಂದು ಆ ದಿನಾಂಕವನ್ನು ರದ್ದುಪಡಿಸಿತ್ತು. ಡಾ. ರಾಧಾಕೃಷ್ಣನ್ ನಗರ ಕ್ಷೇತ್ರವನ್ನು ಆರ್.ಕೆ.ನಗರ ಎಂದು ಕರೆಯಲಾಗುತ್ತಿದ್ದು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು 2016ರ ಡಿಸೆಂಬರ್ನಲ್ಲಿ ನಿಧನ ಹೊಂದಿದ ನಂತರ ಸ್ಥಾನ ತೆರವುಗೊಂಡಿತ್ತು. 


ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರ್ಸೆಲ್ವಮ್ ನೇತೃತ್ವದ ಏಕೀಕೃತ ಪಕ್ಷಕ್ಕೆ ಎಐಎಡಿಎಂಕೆನ ಪ್ರತಿಮಾರೂಪದ 'ಎರಡು ಎಲೆ'ಗಳನ್ನೊಳಗೊಂಡ  ಚಿಹ್ನೆಯನ್ನು ಚುನಾವಣಾ ಆಯೋಗವು ನೀಡಿದ ನಂತರ ಉಪ ಚುನಾವಣೆಯನ್ನು ಘೋಷಣೆ ಮಾಡಿದೆ. ಕಳೆದ ಬಾರಿ ಉಪಚುನಾವಣೆ ಘೋಷಿಸಿದ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಪಕ್ಷದ ವಿಭಜಿತ ಗುಂಪುಗಳನ್ನು ವಿರೋಧಿಸಿದ್ದರು. ಆ ಸಂದರ್ಭದಲ್ಲಿ ಎರಡೂ ಬಣಗಳು ಉಪಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಹೆಸರಿಸಿದ್ದವು.


ಎಐಎಡಿಎಂಕೆ ಪಕ್ಷದ ಟಿಟಿವಿ ದಿನಕಾರನ್ ನೇತೃತ್ವದ ವಿ.ಕೆ. ಶಶಿಕಾಲಾ ಬಣವು ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಕ್ಷದ ನಾಯಕಿ ಜಯಲಲಿತಾ ಮರಣದ ನಂತರದ ತಿಂಗಳಿನಲ್ಲಿ ಪಕ್ಷದ ಬಣಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳು ಜನರಿಂದ ಸಹಾನುಭೂತಿ ಮತದ ಲಾಭವನ್ನು ಕಳೆದುಕೊಳ್ಳಲಿದೆ ಎಂದು ಗ್ರಹಿಸಲಾಗಿದೆ.