ಚೆನ್ನೈ: ಸೋಮವಾರ ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನದಂದು ತಮಿಳುನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹುಟ್ಟಿದ ನವಜಾತ ಶಿಶುವಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಟಿ. ಸುಂದರಾಜನ್ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದರು.


COMMERCIAL BREAK
SCROLL TO CONTINUE READING

ಚೆನ್ನೈನ ಕೇಂದ್ರ ಭಾಗದಲ್ಲಿರುವ ಪಾರ್ಸವಂಕಂನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಸಿದ ಮಗುವಿಗೆ ಟಿ. ಸುಂದರಾಜನ್ ಉಂಗುರವನ್ನು ನೀಡಿದರು. ಜೊತೆಗೆ ಕಳೆದ ಕೆಲವು ದಿನಗಳಲ್ಲಿ ಹುಟ್ಟಿದ ಇತರ ನವಜಾತ ಶಿಶುಗಳಿಗೂ ಸಹ ಉಡುಗೊರೆಗಳನ್ನು ನೀಡಿದರು.
 
ಸೋಮವಾರದಂದು  PHC ಯಲ್ಲಿ ಜನಿಸುವ ಎಲ್ಲಾ ಮಕ್ಕಳಿಗೂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವುದಾಗಿ ಪಕ್ಷ ಈ ಮೊದಲೇ ಘೋಷಿಸಿತ್ತು. ಆದರೆ ಒಂದು ಮಗು ಮಾತ್ರ ಕೇಂದ್ರದಲ್ಲಿ ಜನಿಸಿದೆ ಹಾಗಾಗಿ ಆ ಮಗುವಿಗೆ ಮಾತ್ರ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದೇವೆ. ಇತರ 17-18 ನವಜಾತ ಶಿಶುಗಳಿಗೂ ಉಡುಗೊರೆ ನೀಡಲಾಗಿದೆ ಎಂದು ಸುಂದರರಾಜನ್ ಹೇಳಿದರು. 



ಪ್ರಧಾನಿ ಹುಟ್ಟುಹಬ್ಬವನ್ನು ಆಚರಿಸಲು, ರಾಜ್ಯ ಘಟಕ ಉಪನಗರ ತಾಂಬಾರಂನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಅನೇಕ ಜನರಿಗೆ ಕಲ್ಯಾಣ ನೆರವನ್ನು ನೀಡಿದರು. ಅವರು ಭಾನುವಾರ ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ನಂತರ ತಿರುತಾನಿಯಲ್ಲಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.


ಪ್ರಹ್ಲಾದ್ ಮೋದಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಾನು ಬಾಲಾಜಿ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ಬಾಲಾಜಿ ದೀರ್ಘಾವಧಿಯ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸಿದೆ" ಎಂದು ಅವರು ಹೇಳಿದರು.