ತಮಿಳುನಾಡು ಕಾರ್ ಬ್ಲಾಸ್ಟ್ : ISIS ಕುರಿತ ರೋಚಕ ಮಾಹಿತಿ ಬಿಚ್ಚಿಟ್ಟ ಅಣ್ಣಾಮಲೈ..!
ಕಳೆದ 24ನೇ ತಾರೀಖಿನಂದು ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ನಡೆದ ಸ್ಫೋಟ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಘಟನೆಯಲ್ಲಿ ಜಮೀಶಾ ಮುಬಿನ್ ಎಂಬ ಯುವಕ ಮೃತಪಟ್ಟಿದ್ದ. ಅಲ್ಲದೆ, ಈ ಘಟನೆಯ ಹಿಂದೆ ಭಯೋತ್ಪಾದನಾ ಕೃತ್ಯದ ಸಾಧ್ಯತೆ ಇದೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಸದ್ಯ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಚೆನ್ನೈ : ಕಳೆದ 24ನೇ ತಾರೀಖಿನಂದು ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ನಡೆದ ಸ್ಫೋಟ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಘಟನೆಯಲ್ಲಿ ಜಮೀಶಾ ಮುಬಿನ್ ಎಂಬ ಯುವಕ ಮೃತಪಟ್ಟಿದ್ದ. ಅಲ್ಲದೆ, ಈ ಘಟನೆಯ ಹಿಂದೆ ಭಯೋತ್ಪಾದನಾ ಕೃತ್ಯದ ಸಾಧ್ಯತೆ ಇದೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಸದ್ಯ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಅಣ್ಣಾಮಲೈ ಅವರು, ಈ ಸ್ಪೋಟ ನಡೆದ ಹಿಂದಿನ ದಿನ ಜಮೀಶಾ ಮುಬಿನ್ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ, ʼ ನನ್ನ ಸಾವಿನ ಸುದ್ದಿ ನಿಮಗೆ ತಲುಪಿದರೆ, ನನ್ನ ತಪ್ಪನ್ನು ಕ್ಷಮಿಸಿ. ನನ್ನ ಕೊರತೆಯನ್ನು ಮರೆಯಿರಿ. ನನ್ನ ಸಾವಿನ ಮೆರವಣಿಗೆಯಲ್ಲಿ ಭಾಗಿಯಾಗಿ ಪ್ರಾರ್ಥಿಸಿʼ ಎಂದು ಬರೆದುಕೊಂಡಿದ್ದಾನೆ. ಇದು ISIS ಸಂಘಟನೆಯ ಆಕ್ರಮಣಕ್ಕೆ ಮುಂಚಿತವಾಗಿ ಬಳಸಬಹುದಾದ ಒಂದು ವಾಕ್ಯ ಎಂದಿದ್ದಾರೆ.
ಇದನ್ನೂ ಓದಿ: ಸಿಪಿಎಂ ನಾಯಕರು ನನ್ನಿಂದ ‘ಲೈಂಗಿಕ ಸಹಕಾರ’ ಬಯಸಿದ್ದರು; ಹೊಸ ಬಾಂಬ್ ಸಿಡಿಸಿದ ಸ್ವಪ್ನಾ ಸುರೇಶ್!
ಅಲ್ಲದೆ, ಇದು ಆತ್ಮಾಹುತಿ ದಾಳಿ. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 50 ಕೆಜಿ ಅಮೋನಿಯಂ ನೈಟ್ರೈಟ್, ಪೊಟಾಶಿಯಂ, ಸೊಡಿಯಂ, ಪ್ಯೂಸ್ ವೈರ್, ಏಳು- ವೋಲ್ಟ್ ಬ್ಯಾಟರಿಯನ್ನು ಪೊಲೀಸರು ವಸಕ್ಕೆ ಪಡೆದಿದ್ದಾರೆ. ಆದರೆ, ಈವರೆಗೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 8 ಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಆದ್ರೆ ಈ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ವಹಿಸಬೇಕು ಎಂದು ಅಣ್ಣಾಮಲೈ ಅವರು ಒತ್ತಾಯಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ