Schoo Holidays : ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ಮಧ್ಯಾಹ್ನ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಹೊರಗಿರುವ ಜನರು ತಮ್ಮ ಊರಿಗೆ ಹೋಗಲು ಅನುಕೂಲವಾಗುವಂತೆ ಹಾಗೂ ಸಂಜೆ ವೇಳೆ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡು ಸರ್ಕಾರ ಈ ಆದೇಶ ಹೊರಡಿಸಿದೆ. ಅಲ್ಲದೇ ನಾಳೆ ಸಂಜೆ ಹೊಸ ಬಟ್ಟೆ, ಪಟಾಕಿ ಖರೀದಿಸಲು ಮುಂದಾಗಿದ್ದ ಮಕ್ಕಳಿಗೆ ಸರಕಾರದ ಈ ಘೋಷಣೆ ಸಂತಸ ನೀಡಿದೆ. 


COMMERCIAL BREAK
SCROLL TO CONTINUE READING

ಈ ಸಂಬಂಧ ತಮಿಳುನಾಡು ಸರಕಾರ ಆದೇಶ ಹೊರಡಿಸಿದ್ದು, ''ಅಕ್ಟೋಬರ್ 30ರ ಬುಧವಾರ ಬೆಳಗ್ಗೆ ಮಾತ್ರ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಮಧ್ಯಾಹ್ನ ಅಂದರೆ ಅರ್ಧ ದಿನ ರಜೆ ನೀಡಿ ತಮಿಳುನಾಡು ಸರಕಾರ ಆದೇಶ ಹೊರಡಿಸಿದೆ. ನವೆಂಬರ್ 4 ರಂದು ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. 


ಇದನ್ನೂ ಓದಿ : Daily GK Quiz: ಕರ್ನಾಟಕದ ಯಾವ ನಗರವನ್ನು ʼಚೋಟಾ ಬಾಂಬೆʼ ಎಂದು ಕರೆಯುತ್ತಾರೆ?


ದೀಪಾವಳಿಗೆ ಗ್ರೂಪ್ ಸಿ ಮತ್ತು ಡಿ ನೌಕರರಿಗೆ ಸರ್ಕಾರ ಈಗಾಗಲೇ ಬೋನಸ್ ಘೋಷಿಸಿದೆ. ಇನ್ನುಳಿದವರಿಗೆ ವಿಶೇಷ ಬೋನಸ್ ಮೊತ್ತ ನೀಡುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡಾ ಆದೇಶಿಸಿದ್ದರು. ಹಾಗಾಗಿ ಅವರೂ ಖುಷಿಯಾಗಿದ್ದಾರೆ. ಒಟ್ಟಾರೆ, ಈ ವರ್ಷದ ದೀಪಾವಳಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಪ್ರಕಟಣೆಗಳು ಸರ್ಕಾರಿ ನೌಕರರು ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂತೋಷವನ್ನು ತಂದಿವೆ.


ಇದನ್ನೂ ಓದಿ :ಶಬರಿಮಲೆ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್; ವಿಮಾನದಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.