ಕೃಷ್ಣ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಮಾಜಿ ಸಚಿವ ಮತ್ತು ಟಿಡಿಪಿ ನಾಯಕ ಕೊಲ್ಲು ರವೀಂದ್ರ ಅವರನ್ನು ಆಂಧ್ರಪ್ರದೇಶ ಪೊಲೀಸರು ಶುಕ್ರವಾರ ಕೊನೆರು ಕೇಂದ್ರದಲ್ಲಿ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಮರಳು ಕೊರತೆಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಶುಕ್ರವಾರ ಬೆಳಿಗ್ಗೆ 36 ಗಂಟೆಗಳ ಸುದೀರ್ಘ ಉಪವಾಸ ಕೈಗೊಳ್ಳುವುದಾಗಿ ಘೋಷಿಸಿ, ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಪೊಲೀಸರು ಕೊಲ್ಲು ರವಿಂದ್ರ ಅವರನ್ನು ಬಂಧಿಸಿದ್ದಾರೆ.


ಟಿಡಿಪಿ ಜಿಲ್ಲಾಧ್ಯಕ್ಷ ಬಿ ಅರ್ಜುನುಡು ಮತ್ತು ಕೊಲ್ಲು ರವೀಂದ್ರ ಬಂಧನದ ಬಳಿಕ ಮತ್ತಷ್ಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚರಿಕಾ ಕ್ರಮವಾಗಿ ಮಚಿಲಿಪಟ್ನಂನ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.