ನವದೆಹಲಿ: ಆರುಕು ಎಂಎಲ್ಎ ಕಿದಾರಿ ಸರ್ವೇಶ್ವರ ರಾವ್ ಸೇರಿದಂತೆ ಇಬ್ಬರು ತೆಲುಗು ದೇಶಂ ನಾಯಕರು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ದುಂಬ್ರಿಗುಡಾ ಮಂಡಲ್ನಲ್ಲಿ ಭಾನುವಾರ ಮಧ್ಯಾಹ್ನ ಮಹಿಳಾ ನಕ್ಸಲರಿಂದ ಹತ್ಯೆಗಿಡಾಗಿದ್ದಾರೆ.



COMMERCIAL BREAK
SCROLL TO CONTINUE READING

ಭಾನುವಾರದಂದು  ಮಧ್ಯಾಹ್ನ, ರಾವ್ ಮತ್ತು ಮಾಜಿ ಎಂಎಲ್ಎ ಸವೇರಿ ಸೋಮಾ ಅವರು ಲಿಪ್ಪುಪ್ಪು ಎಂಬ ಗ್ರಾಮದ "ಗ್ರಾಮದರ್ಶಿನಿ" ಹಾಜರಾಗಲು ಮೋಟಾರ್ ಸೈಕಲ್ ಮೇಲೆ ಹೋಗುತ್ತಿರುವ ಸಂದರ್ಭದಲ್ಲಿ ನಕ್ಸಲರು ಅವರನ್ನು ತಡೆದು ಗಣಿಗಾರಿಕೆ ಚಟುವಟಿಕೆ ನಿಲ್ಲಿಸಲು ಆದೇಶಿಸಿದ್ದಾರೆ. ಹೀಗೆ ವಾಗ್ವಾದ ನಡೆಯುತ್ತಿದ್ದ ಸಂದರ್ಭದಲ್ಲಿ  ನಕ್ಸಲರು ಇಬ್ಬರ ಮೇಲೆ ಗುಂಡಿನ ಮಳೆಗೈದಿದ್ದಾರೆ. ಗುಂಡು ಹಾರಿಸಿದವರಲ್ಲಿ ಬಹುತೇಕರು ಮಹಿಳೆಯರೆ ಇದ್ದರು ಎಂದು ಪ್ರತ್ಯೆಕ್ಷದರ್ಶಿಗಳು ಹೇಳಿದ್ದಾರೆ.



ವೈಎಸ್ಆರ್ ಕಾಂಗ್ರೆಸ್ ಪಕ್ಷದ ಟಿಕೆಟ್ನಲ್ಲಿ ಚುನಾಯಿತರಾದ ರಾವ್ ಅವರು 2016 ರಲ್ಲಿ ಟಿಡಿಪಿ ಪಕ್ಷಕ್ಕೆ ಸೇರಿದ್ದರು. ಗಿರಿಜನ ಸಂಘಂನ ಬ್ಯಾನರ್ ಅಡಿಯಲ್ಲಿ ಬುಡಕಟ್ಟು ಜನಾಂಗದವರು ಹುಕುಂಪೆಟ್ ಮಂಡಲ್ನಲ್ಲಿ 3 ಹೆಕ್ಟೇರ್ನಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆಗೆ ರಾವ್ ಅವರು 2008 ರಲ್ಲಿ ಗುತ್ತಿಗೆಯನ್ನು ತೆಗೆದುಕೊಂಡಿದ್ದರು. ಆದರೆ ಬುಡಕಟ್ಟು ಜನರು ಇದು ತಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿರೋಧಿಸಿದ್ದರು ಎನ್ನಲಾಗಿದೆ