ನವದೆಹಲಿ: ಆಂಧ್ರಪ್ರದೇಶ ವಿಧಾನಪರಿಷತ್ ಸದಸ್ಯ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡ ಎಂ.ವಿ.ವಿ.ಮೂರ್ತಿ ಅಮೇರಿಕಾದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ವಿಶಾಖಪಟ್ಟಣಂನಿಂದ ಲೋಕಸಭೆಯ ಸದಸ್ಯರಾಗಿ 1991 ರಿಂದ 1996 ಮತ್ತು 1999 ರಿಂದ 2004 ರವರೆಗೆ ಎರಡು ಅವಧಿಗಳವರೆಗೆ ಸೇವೆ ಸಲ್ಲಿಸಿದ್ದಾರೆ.ಎಂ.ವಿ.ವಿ.ಎಸ್. ಮೂರ್ತಿ ಮತ್ತು ಮೂವರು ಅಮೆರಿಕದ ಅಲಾಸ್ಕಾದ ಬಳಿಯ ಹೆದ್ದಾರಿಯಲ್ಲಿ ಕಾರಿನ ಟ್ರಕ್ ಘರ್ಷಣೆಯಲ್ಲಿ ಮೃತಪಟ್ಟರು. ಅಲ್ಲಿ ಅವರು ಅಕ್ಟೋಬರ್ 6 ರಂದು ನಡೆಯಲಿರುವ ಜಿಐಟಿಎಂ ಅಲುಮ್ನಿ ಸಭೆಯಲ್ಲಿ ಭಾಗವಹಿಸಲು ಹೋಗಿದ್ದರು.


ಸೋಮವಾರ ಮಧ್ಯಾಹ್ನ ವನ್ಯಜೀವಿ ಅಭಯಾರಣ್ಯಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಟಿಡಿಪಿ ನಾಯಕನ ದೇಹವನ್ನು ರಾಜ್ಯಕ್ಕೆ ಮರಳಿ ತರಲು ಉತ್ತರ ಅಮೆರಿಕದ ಸದಸ್ಯರ ತೆಲುಗು ಸಂಘವು ಯು.ಎಸ್. ಅಧಿಕಾರಿಗಳೊಂದಿಗೆ ಸಂಪರ್ಕಿಸಿಸುತ್ತಿದೆ. ಎಂ.ವಿ.ವಿ. ಮೂರ್ತಿ 1983 ರಿಂದಲೂ ಟಿಡಿಪಿ ಪಕ್ಷದ ಸಕ್ರಿಯ ಮುಖಂಡರಾಗಿದ್ದರು ಮತ್ತು ಪಕ್ಷದ ಸ್ಥಾಪಕ ಅಧ್ಯಕ್ಷ ಎನ್.ಟಿ ರಾಮರಾವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.