ಮೋದಿ ಸರ್ಕಾರಕ್ಕೆ ಕುತ್ತು ತಂದೀತೆ ತೆಲುಗು ದೇಶಂ ಅವಿಶ್ವಾಸ ಮಂಡನೆ?
ಆಂಧ್ರಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗದ ಕಾರಣ ತೆಲುಗು ದೇಶಂ ಪಕ್ಷ ಕೇಂದ್ರ ಸರ್ಕಾರದ ಮೈತ್ರಿಯಿಂದ ಹೊರಬಂದಿದೆ. ಈಗ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಂಡಿಸಲು ನಿರ್ಧರಿಸಿದೆ.
ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗದ ಕಾರಣ ತೆಲುಗು ದೇಶಂ ಪಕ್ಷ ಕೇಂದ್ರ ಸರ್ಕಾರದ ಮೈತ್ರಿಯಿಂದ ಹೊರಬಂದಿದೆ. ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಂಡಿಸಲು ನಿರ್ಧರಿಸಿದೆ. ಈಗ ಟಿಡಿಪಿ ಆರು ಪಕ್ಷಗಳೊಂದಿಗೆ ಒಟ್ಟಿಗೆ ಸೇರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವಂತೆ ವೈಎಸ್ಆರ್ ಪಕ್ಷವು ಲೋಕಸಭೆಯಲ್ಲಿ ನೋಟಿಸ್ ನೀಡಿದೆ.
ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಪಡೆಯಲು 50 ಸದಸ್ಯರ ಬೆಂಬಲ ಬೇಕಾಗುತ್ತದೆ. ಆದರೆ ಲೋಕಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಒಂಬತ್ತು ಸಂಸದರನ್ನಷ್ಟೇ ಹೊಂದಿದೆ. ಹಾಗಾಗಿ ಪಕ್ಷವು ವಿರೋಧ ಪಕ್ಷಗಳ ಬೆಂಬಲವನ್ನು ಕೋರಿದೆ. ಪ್ರಸ್ತುತ ಎನ್ ಎ ಸರ್ಕಾರದ ಅವಧಿಯಲ್ಲಿ ಸರ್ಕಾರವು ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡನೆ ಎದುರಿಸುತ್ತಿದೆ.
ಏನಿದು ಅವಿಶ್ವಾಸ ಪ್ರಸ್ತಾಪ?
ಅವಿಶ್ವಾಸ ಪ್ರಸ್ತಾಪವು ಪಾರ್ಲಿಮೆಂಟರಿ ಪ್ರಸ್ತಾವನೆಯನ್ನು ಹೊಂದಿದೆ. ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಕೆಡವಲು ಅಥವಾ ದುರ್ಬಲಗೊಳಿಸಲು ಈ ಪ್ರಸ್ತಾಪವನ್ನು ಮಂಡಿಸಲಾಗುತ್ತದೆ. ಸಂಸತ್ತಿನ ಮತದಾನದ ಮೂಲಕ ಬಹುಮತದ ಆಧಾರದ ಮೇಲೆ ಈ ಅವಿಶ್ವಾಸ ಗೊತ್ತುವಳಿಯನ್ನು ಅಂಗೀಕರಿಸಲಾಗುವುದು.
ಒಂದುವೇಳೆ ಅವಿಶ್ವಾಸ ಮಂಡನೆಯಾದರೆ ಮುಂದೆ ಏನಾಗಬಹುದು?
ಅವಿಶ್ವಾಸ ಮಂಡನೆ ಮಂಡಿಸಲು ಲೋಕಸಭೆ ಸ್ಪೀಕರ್ ಅನುಮತಿಯನ್ನು ಪಡೆಯಬೇಕು. ಒಪ್ಪಿಕೊಳ್ಳಬೇಕು. ಸ್ಪೀಕರ್ ಇದನ್ನು ಅನುಮೋದಿಸಿದರೆ, ಅದನ್ನು 10 ದಿನಗಳಲ್ಲಿ ಹೌಸ್ನಲ್ಲಿ ಚರ್ಚಿಸಲಾಗುವುದು. ಚರ್ಚೆಯ ನಂತರ, ಸ್ಪೀಕರ್ ಅವಿಶ್ವಾಸ ಗೊತ್ತುವಳಿಯ ಪರವಾಗಿ ಅಥವಾ ವಿರೋಧವಾಗಿ ಮತ ಚಲಾಯಿಸಬಹುದು.
ಏನು ಮೋದಿ ಸರ್ಕಾರ ಉರುಳುವುದೇ?
ಸದ್ಯ ಮೋದಿ ಸರ್ಕಾರವನ್ನು ಉರುಳಿಸುವುದು ಸುಲಭದ ಮಾತಲ್ಲ. ಕಾರಣ 543+2 ಸ್ಥಾನಗಳಿರುವ ಲೋಕಸಭೆಯಲ್ಲಿ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷಕ್ಕೆ ಒಟ್ಟು 269 ಸಂಸದರ ಬೆಂಬಲ ಬೇಕಾಗುತ್ತದೆ. ಆದರೆ ಲೋಕಸಭೆಯಲ್ಲಿ ಕೇವಲ ಬಿಜೆಪಿ ಒಂದೇ 274 ಸಂಸದರನ್ನು ಹೊಂದಿದೆ.