ಪುಣೆ : ಎಷ್ಟೇ ಓದಿದ್ದರೂ ನಿರುದ್ಯೋಗಿಗಳಾಗಿ ಕೈಕಟ್ಟಿ ಕುಳಿತುಕೊಳ್ಳುವವರ ನಡುವೆ, ಇಲ್ಲೊಬ್ಬರು ಚಹಾ ಮಾರಿ ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಿದ್ದಾರೆ! ಅಚ್ಚರಿಯಾಗುತ್ತಿದೆ ಅಲ್ಲವೇ? ಆದರೂ ಇದು ಸತ್ಯ.


COMMERCIAL BREAK
SCROLL TO CONTINUE READING

ಯವ್ಲೇ ಟೀ ಹೌಸ್‌ ಸಂಸ್ಥಾಪಕರಾಗಿರುವ ನವನಾಥ್‌ ಯವ್ಲೇ ಅವರೇ ಈ ಸಾಧಕ. ಪುಣೆ ನಗರದಲ್ಲಿ ಅವರ 3 ಮಳಿಗೆಗಳಿದ್ದು ಪ್ರತೀ ಮಳಿಗೆಯಲ್ಲಿ ತಲಾ 12ಮಂದಿ ಉದ್ಯೋಗಿಗಳಿದ್ದಾರೆ. ಅಷ್ಟೇ ಅಲ್ಲ, 
ನವನಾಥ್‌ ಅವರು ಶೀಘ್ರದಲ್ಲಿಯೇ ತಮ್ಮ ಬ್ರ್ಯಾಂಡನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಮಾಡುವ ಇರಾದೆ ಹೊಂದಿದ್ದಾರೆ.


ಪಕೋಡ ವ್ಯಾಪರದಂತೆಯೇ, ಚಹಾ ಮಾರುವುದೂ ಒಂದು ಉದ್ಯೋಗವಾಗಿದೆ. ಚಹಾ ಮಾರುವುದು ಒಂದು ಒಳ್ಳೆಯ ಉದ್ಯೋಗ. ನನ್ನ ಉದ್ಯಮದಲ್ಲಿ ಹಲವರಿಗೆ ಉದ್ಯೋಗ ನೀಡಿರುವ ತೃಪ್ತಿ ನನಗಿದೆ' ಎಂದು ಹೇಳುವ ಮೂಲಕ ಚಹಾ ಮಾರುವ ಕುರಿತಾಗಿ ಅವರಿಗಿರುವ ಅಪಾರ ಅಭಿಮಾನವನ್ನು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ. 


ಚಾಯ್‌ವಾಲಾ ಎಂದೇ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡ ಮಾರುವವನನ್ನು ನಿರುದ್ಯೋಗಿ ಎನ್ನುತ್ತೀರಾ ಎಂದು ಪ್ರಶ್ನಿಸಿದ ಬಳಿಕ ವಿರೋಧಿಗಳು ಭಾರೀ ವಿರೋಧವನ್ನು ತೋರಿದ್ದರು. ಆದರೀಗ ಪುಣೆಯ ಈ ಚಹಾ ಮಾರಾಟಗಾರ ತಿಂಗಳಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ಸಂಪಾದನೆ ಮಾಡುವ ಮೂಲಕ ಹಲವು ನಿರುದ್ಯೋಗಿಗಳಿಗೆ ಮಾದರಿಯಾಗಿ ಭಾರೀ ಸುದ್ದಿಯಾಗಿದ್ದಾರೆ.