ಐಶ್ವರ್ಯ ರೈ ಜೊತೆ ಸಂಬಂಧ ಕಡಿದುಕೊಳ್ಳಲು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತಿ !
ಬಿಹಾರದ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ರೈ ಅವರ ವಿವಾಹ ವಿಚ್ಛೇದನದ ವರದಿಗಳನ್ನು ದೃಢಪಡಿಸಿದ್ದಾರೆ.
ನವದೆಹಲಿ: ಬಿಹಾರದ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ರೈ ಅವರ ವಿವಾಹ ವಿಚ್ಛೇದನದ ವರದಿಗಳನ್ನು ದೃಢಪಡಿಸಿದ್ದಾರೆ.
ನಿರ್ಬಂಧಿತ ಮತ್ತು ನಿಗ್ರಹದ ಜೀವನವನ್ನು ನಡೆಸುವದಕ್ಕಿಂತ ಇದು ಉತ್ತಮ ಎಂದು ತೇಜ್ ಪ್ರತಾಪ್ ಹೇಳಿರುವುದನ್ನು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. "ನಾನು ಮನವಿಯೊಂದನ್ನು ಸಲ್ಲಿಸಿರುವುದು ನಿಜ ಘುತ್-ಘುತ್ ಕೆ ಜೀನ್ ಸೆ ತೋ ಕೊಯಿ ಫೈಯೆದಾ ಹೈ ನಹಿ (ನಿರ್ಭಂದಿತ ಜೀವನವನ್ನು ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ)."ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.
ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ಅವರ ಮಗ ತೇಜ್ ಪ್ರತಾಪ್ ಅವರು ಈ ವರ್ಷದ ಮೇ 12 ರಂದು ಪಾಟ್ನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಹಿರಿಯ ಆರ್ಜೆಡಿ ನಾಯಕ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯಾ ರೈ ಅವರನ್ನು ಮದುವೆಯಾಗಿದ್ದಾರೆ.
ತೇಜ್ ಪ್ರತಾಪ್ ಪರ ವಕೀಲ ಯಶವಂತ್ ಕುಮಾರ್ ಶರ್ಮಾ ಅವರು "ಅವರು ಜೊತೆಯಾಗಿ ಸಾಗಲು ಸಾಧ್ಯವಾಗಲಿಲ್ಲ, ನಾನು ತೇಜ್ ಪ್ರತಾಪ್ ಯಾದವ್ ಅವರ ಪರವಾಗಿ ಹಿಂದೂ ವಿವಾಹ ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದು, ನಾನು ಈ ಕ್ಷಣದಲ್ಲಿ ಯಾವುದನ್ನೂ ಹೇಳಲು ಸಾಧ್ಯವಿಲ್ಲ" ಎಂದು ಹೇಳಿದರು.