ವಿಚ್ಛೇದನದ ಮಾತುಕತೆ ನಂತರ ಮನೆಗೆ ಹಿಂದಿರುಗದ ಲಾಲೂ ಪುತ್ರ !
ಆರ್ಎಡಿಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ರಾಂಚಿಯಲ್ಲಿ ವಿವಾಹ ವಿಚ್ಛೇದನದ ವಿಚಾರವಾಗಿ ಚರ್ಚಿಸಿದ ಬಳಿಕೆ ಮನೆಗೆ ಹಿಂದಿರುಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನವದೆಹಲಿ: ಆರ್ಎಡಿಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ರಾಂಚಿಯಲ್ಲಿ ವಿವಾಹ ವಿಚ್ಛೇದನದ ವಿಚಾರವಾಗಿ ಚರ್ಚಿಸಿದ ಬಳಿಕೆ ಮನೆಗೆ ಹಿಂದಿರುಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತೇಜ್ ಪ್ರತಾಪ್ ಅವರ ತಾಯಿ, ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ಮನೆಯಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್ಜೆಡಿ ನಾಯಕರು ಹೇಳುವಂತೆ ತೇಜ್ ಪ್ರತಾಪ್ ಕಳೆದ ಸೋಮವಾರದಿಂದ ವಾರಣಾಸಿಯಲ್ಲಿ ನೆಲೆಯೂರಿದ್ದಾರೆ ಎನ್ನಲಾಗುತ್ತಿದೆ. ತೇಜ್ ಪ್ರತಾಪ್ ಕಾಣೆಯಾಗಿದ್ದಾನೆ ಎನ್ನುವ ವರದಿಗಳ ವಿಚಾರವಾಗಿ ಉತ್ತರಿಸಿರುವ ಪಕ್ಷದ ಅಧಿಕೃತ ಮೂಲಗಳು ಅವರು ವಾರಣಾಸಿಯಲ್ಲಿದ್ದಾರೆ ಕೆಲವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿವೆ.
ತೇಜ್ ಪ್ರತಾಪ್ ಅವರು ತಮ್ಮ ತಾಯಿಯನ್ನೂ ಒಳಗೊಂಡಂತೆ ಅವರ ಕುಟುಂಬದ ಮೇಲೆ ಪತ್ನಿ ಐಶ್ವರ್ಯಾ ರೈ ಅವರ ಜೊತೆಗಿನ ವಿಚ್ಛೇದನದ ನಿರ್ಧಾರಕ್ಕೆ ಬೆಂಬಲ ನೀಡದ ಕಾರಣ ಅವರು ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಧಾರ್ಮಿಕ ವ್ಯಕ್ತಿಯಾಗಿದ್ದ ತೇಜ್ ಪ್ರತಾಪ್ ಅವರಿಗೆ ತಮ್ಮ ವಿಚ್ಛೇದನದ ನಿರ್ಧಾರ ವಿಚಾರವಾಗಿ ಕುಟುಂಬ ಅನುಮೋದನೆ ನೀಡಿರದ ಕಾರಣ ಅವರು ಸ್ವಲ್ಪ ವಿಶ್ರಾಂತಿ ಪಡೆಯಲು ವಾರಣಾಸಿಗೆ ತೆರಳಿದ್ದರು. ಅವರು ಶೀಘ್ರದಲ್ಲೇ ಮರಳಲು ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತೇಜ್ ಪ್ರತಾಪ್ ಯಾದವ್ ನವೆಂಬರ್ 2 ರಂದು ಪಾಟ್ನಾ ಹೈಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಪತ್ನಿಯೊಂದಿಗೆ ತಮಗೆ ಇರಲು ಇಚ್ಛೆಯಿಲ್ಲ ತಮ್ಮ ನಡುವೆ ಹೊಂದಾಣಿಕೆ ಸಮಸ್ಯೆ ಇದೆ ಎಂದು ತಿಳಿಸಿದ್ದರು.