ನವದೆಹಲಿ: ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಮುಖಂಡ ತೇಜಶ್ವಿ ಯಾದವ್ ಅವರಿಗೆ  ತಮ್ಮ ತಂದೆ ಹಾಗೂ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಲು ಬಿಜೆಪಿ ಅನುಮತಿ ನಿರಾಕರಿಸಿದೆ ಎಂದು ಸರಣಿ ಟ್ವೀಟ್ ಗಳ ಮೂಲಕ ಆರೋಪಿಸಿದ್ದಾರೆ.



COMMERCIAL BREAK
SCROLL TO CONTINUE READING

ಜೈಲು ಶಿಕ್ಷೆಗೆ ಒಳಗಾಗಿರುವ ಲಾಲು ಅವರು ಪ್ರಸ್ತುತ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್ಐಎಂಎಸ್) ನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.ಈಗ ಅವರನ್ನು ಭೇಟಿ ಮಾಡಲು ಅವಕಾಶ ನೀಡಿರುವುದರ ಹಿಂದೆ  ಬಿಜೆಪಿ ಪಿತೂರಿ ಇದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.ತಮ್ಮ ತಂದೆಯನ್ನು ಭೇಟಿ ಮಾಡಲು ಅವಕಾಶ ನೀಡದಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ.



"ನಿನ್ನೆ ನಾನು ರಾಂಚಿ ಆಸ್ಪತ್ರೆಯಲ್ಲಿ ನನ್ನ ತಂದೆಗೆ ಭೇಟಿಯಾಗಲು ಕಾಯುತ್ತಿದ್ದೇನೆ ಆದರೆ ಸರ್ವಾಧಿಕಾರಿ ಬಿಜೆಪಿ ಸರ್ಕಾರ ತಂದೆಯನ್ನು ಭೇಟಿ ಮಾಡುವುದಕ್ಕೆ ಮಗನಿಗೆ ಅನುಮತಿಸುವುದಿಲ್ಲ.ಲಾಲು ಪ್ರಸಾದ್ ಯಾದವ್ ವಿರುದ್ಧ ಪಿತೂರಿ ಮಾಡಲಾಗಿದೆ. ಇದನ್ನು ಅವರು ಪೊಲೀಸ್ ಭದ್ರತೆಯ ನಡುವೆ ಆಸ್ಪತ್ರೆಯಲ್ಲಿಯೂ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.