Tejaswi's Reply To Amit Shah: ಇಂದು ಬಿಹಾರ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೂರ್ಣಿಯಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು. ಲಾಲು  ಸರ್ಕಾರಕ್ಕೆ ಸೇರ್ಪಡೆಗೊಂಡ ಬಳಿಕ ಮತ್ತು ನಿತೀಶ್ ಅವರ ಮಡಿಲಲ್ಲಿ ಕುಳಿತ ಬಳಿಕ ಇದೀಗ, ಬಿಹಾರದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ಎಂದು ಹೇಳಿದ್ದಾರೆ. ಶಾ ಈ ಹೇಳಿಕೆಗೆ ಇದೀಗ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತೀಕ್ಷ್ಣ  ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ತೀಕ್ಷ್ಣ ತಿರುಗೇಟು ನೀಡಿದ ತೇಜಸ್ವಿ
ಅಮಿತ್ ಶಾ ಅವರ ಹೇಳಿಕೆಗೆ ತೀಕ್ಷ್ಣ ತಿರುಗೇಟು ನೀಡಿರುವ ಬಿಹಾರದ ಉಪಮುಖ್ಯಮಂತ್ರಿ ನೀವು ಹೆದರಿಸಲು ಇಲ್ಲಿಗೆ ಬಂದಿದ್ದೀರಾ? ಎಂದಿದ್ದಾರೆ. ಅವರು ದೇಶದ ಗೃಹ ಮಂತ್ರಿಯಂತೆ ಕಾಣಿಸಿಕೊಂಡಿದ್ದಾರೆಯೇ? ನನಗಂತೂ ಅವರು ರಾಜಕೀಯ ನಾಯಕರೂ ಅಲ್ಲ, ಗೃಹ ಸಚಿವರೂ ಅಲ್ಲ ಎಂಬಂತೆ ಕಂಡಿದ್ದಾರೆ ಮತ್ತು ಅವರು ನನಗೆ ಹೇಗೆ ಕಂಡರೂ ಎಂಬುದನ್ನು ನಾನು ಹೇಳಲು ಬಯಸುವುದಿಲ್ಲ ಎನಿದಿದ್ದಾರೆ. ಅಮಿತ್ ಶಾ ಮೇಲೆ ವಾಗ್ದಾಳಿ ನಡೆಸಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಅಮಿತ್ ಶಾ ಹೊಸದೇನೂ ಹೇಳಿಲ್ಲ. ಅಮಿತ್ ಶಾ ಯಾವ ಉದ್ದೇಶಕ್ಕೆ ಬಂದಿದ್ದಾರೆ, ಏನು ಹೇಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಮಿತ್ ಶಾ ಬಳಿ ಇದೀಗ ಹೇಳಲು ಏನೂ ಉಳಿದಿಲ್ಲ ಎಂದಿದ್ದಾರೆ


ಶಾ ಗುರಿಯಾಗಿಸಿದ ತೇಜಸ್ವಿ ಯಾದವ್
ಇಂದು ನಾನು ಗಡಿ ಜಿಲ್ಲೆಗಳಿಗೆ ಬಂದಿರುವುದರಿಂದ ಲಾಲು ಯಾದವ್ (ಆರ್‌ಜೆಡಿ ಮುಖ್ಯಸ್ಥ) ಮತ್ತು (ಸಿಎಂ) ನಿತೀಶ್ ಕುಮಾರ್ ಜೋಡಿಗೆ ಹೊಟ್ಟೆ ನೋವು ತಂದಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಅವರು ಅಶಾಂತಿಯನ್ನು ಸೃಷ್ಟಿಸಲು ಬಯಸುತ್ತಾರೆ. ನಿತೀಶ್  ಅವರು ಲಾಲು ಮಡಿಲಲ್ಲಿ ಕುಳಿತಿರುವಾಗ, ಗಡಿ ಜಿಲ್ಲೆಗಳು ಭಾರತದ ಭಾಗವೆಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಭಯಪಡಬೇಡಿ ಎಂದಿದ್ದಾರೆ.


ಇದನ್ನೂ ಓದಿ-Free Ration: ಕೋಟ್ಯಾಂತರ ಜನರಿಗೆ ಸಿಹಿ ಸುದ್ದಿ: ಮುಂದಿನ 6 ತಿಂಗಳವರೆಗೆ ಉಚಿತ ಪಡಿತರ ಲಭ್ಯ!


ನಿತೀಶ್ ಬೆನ್ನಿಗೆ ಚೂರಿ ಹಾಕಿದ್ದಾರೆ
ಪ್ರಧಾನಿಯಾಗುವ ಆಸೆಯಿಂದ, ಕಾಂಗ್ರಸನ್ನು ವಿರೋಧಿಸಲೆಂದೇ ಹುಟ್ಟಿಕೊಂಡ ಪಕ್ಷದ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನಿತೀಶ್ ಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.


ಇದನ್ನೂ ಓದಿ-ಕೈಗಾರಿಕಾ ಉದ್ದೇಶಕ್ಕಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನ-ಸಚಿವ ಮುರುಗೇಶ್ ನಿರಾಣಿ


ಈ ಕಾರಣದಿಂದ ಸೀಮಾಂಚಲ್ ಆಯ್ದುಕೊಂಡ ಶಾ
ಈ ಸಂದರ್ಭದಲ್ಲಿ ಮಾತನಾಡಿರುವ ಜೆಡಿಯು ಗುಂಪಿನ ವತಿಯಿಂದ ಬಿಹಾರ ಸರ್ಕಾರದಲ್ಲಿ ಸಚಿವರಾಗಿರುವ  ಅಶೋಕ್ ಚೌಧರಿ, ಅಮಿತ್ ಶಾ ಅವರು ಬಿಹಾರದಲ್ಲಿ ತಮ್ಮ ವಾತಾವರಣ ಸೃಷ್ಟಿಸಲು ಬಂದಿದ್ದಾರೆ. ಆದರೆ ಅವರು ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಎಲ್ಲರನ್ನು ಕರೆದುಕೊಂಡು ಹೋಗುತ್ತಾರೆ, ಬಿಜೆಪಿಯ ಒಡೆದು ಆಳುವ ನೀತಿ ಬಿಹಾರದಲ್ಲಿ ನಡೆಯುವುದಿಲ್ಲ. ಬಿಹಾರದ ಜನ ಇಂಥವರಿಗೆ ಯಾವತ್ತೂ ಆಶ್ರಯ ಕೊಟ್ಟಿಲ್ಲ. ಒಡೆದು ಆಳುವ ನೀತಿಯ ಭಾಗವಾಗಿ ಅಮಿತ್ ಶಾ ಸೀಮಾಂಚಲ್ ಪ್ರದೇಶವನ್ನು ರ್ಯಾಲಿಗೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.