ತೆಲಂಗಾಣ, ಆಂಧ್ರಕ್ಕೆ ಜನವರಿ 1 ರಿಂದ ಪ್ರತ್ಯೇಕ ಹೈಕೋರ್ಟ್!
ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಜನವರಿ 1 ರಿಂದ ನೂತನ ಹೈಕೋರ್ಟ್ ಕಾರ್ಯಾರಂಭ ಮಾಡಲಿದೆ.
ಹೈದರಾಬಾದ್: 2019ರ ಜನವರಿ 1 ರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪ್ರತ್ಯೇಕ ಹೈಕೋರ್ಟ್ ಆರಂಭಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶಿಸಿದ್ದಾರೆ.
ಇದುವರೆಗೂ ಹೈದರಾಬಾದ್ ಹೈಕೋರ್ಟ್ ಎರಡೂ ರಾಜ್ಯಗಳಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೀಗ ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಜನವರಿ 1 ರಿಂದ ನೂತನ ಹೈಕೋರ್ಟ್ ಕಾರ್ಯಾರಂಭ ಮಾಡಲಿದೆ. ಈ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ವಿಭಜನೆಗೊಂಡ ನಾಲ್ಕೂವರೆ ವರ್ಷಗಳ ಬಳಿಕ ಎರಡೂ ರಾಜ್ಯಗಳು ತಮ್ಮದೇ ಹೈಕೋರ್ಟ್‌ಗಳನ್ನು ಪಡೆದುಕೊಳ್ಳುತ್ತಿವೆ.
ಪ್ರಸ್ತುತ ನ್ಯಾಯಮೂರ್ತಿ ಟಿ.ಬಿ.ರಾಧಾಕೃಷ್ಣನ್ ಹೈದರಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಜನವರಿ 1 ರಿಂದ ಯಾವ ಹೈಕೋರ್ಟ್ ಜವಾಬ್ದಾರಿ ಹೊರಬೇಕೆಂಬ ಆಯ್ಕೆಯನ್ನು ಅವರಿಗೇ ಬಿಡಲಾಗಿದೆ.