ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್ನಿಂದ ಎರಡನೇ ಪಟ್ಟಿ ಬಿಡುಗಡೆ
ನಿನ್ನೆಯಷ್ಟೇ 65 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ 10 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನವದೆಹಲಿ: ಡಿಸೆಂಬರ್ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗಾಗಿ 65 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ 10 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನೂತನ ಪಟ್ಟಿಯಲ್ಲಿ ರಮೇಶ್ ರಾಥೋಡ್, ಜಜಲಾ ಸುರೇಂದ್ರ, ಆಡ್ಲೂರಿ ಲಕ್ಷ್ಮಣ್ ಕುಮಾರ್, ಕೆ. ಮಹೇಂದ್ರ ರೆಡ್ಡಿ, ಲಕ್ಷ್ಮಣ ರೆಡ್ಡಿ, ಡಾಕ್ಟರ್ ಸರ್ವಾನ್ ದಾಸುಜು, ಪಿ. ವಿಷ್ಣುವರ್ಧನ್ ರೆಡ್ಡಿ, ಸಿ. ಪ್ರತಾಪ್ ರೆಡ್ಡಿ, ಗುಂಡ್ರಾ ವೆಂಕಟ ರಾಮನ್ ರೆಡ್ಡಿ ಮತ್ತು ಕಂಡ್ಲಾ ಉಪೇಂದ್ರ ರೆಡ್ಡಿ ಅವರ ಹೆಸರುಗಳಿವೆ.
ಕಾಂಗ್ರೆಸ್ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಸಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಹಲವು ಕ್ಷೇತ್ರಗಳಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿಯೊಂದಿಗೆ ಚುನಾವಣಾ ಒಪ್ಪಂದಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಟಿಡಿಪಿ ಕೇಂದ್ರದಲ್ಲಿ ಆಡಳಿತಾರೂಢ ಎನ್ಡಿಎ ಒಕ್ಕೂಟದ ಪಾಲುದಾರರಾಗಿದ್ದರೂ, ಆಂಧ್ರಪ್ರದೇಶ ಕೇಂದ್ರ ವಿಶೇಷ ಸ್ಥಾನಮಾನ ನೀಡದಿರುವ ಬಗ್ಗೆ ಒಕ್ಕೂಟದಿಂದ ಬೇರ್ಪಟ್ಟಿದೆ.