ಹೈದ್ರಾಬಾದ್: Thousand Pillar Temple - ತೆಲಂಗಾಣದ (Telangana) ಪಾಲಂಪೆಟ್‌ನಲ್ಲಿರುವ ಪ್ರಸಿದ್ಧ ರಾಮಪ್ಪ ದೇವಾಲಯವನ್ನು (Ramappa Temple) ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳ (UNESCO World Heritage Site) ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜ್ಯದ ಜನರನ್ನು ಅಭಿನಂದನೆ ಸಲ್ಲಿಸಿ, ತಾವು ವೈಯಕ್ತಿಕ ಅನುಭವಕ್ಕಾಗಿ ಅಲ್ಲಿಗೆ ಭೇಟಿ ನೀಡುವಂತೆ ದೇಶದ ನಿವಾಸಿಗಳನ್ನು ಕೋರಿದ್ದಾರೆ.


COMMERCIAL BREAK
SCROLL TO CONTINUE READING

'Excellent! Congratulations to everyone'
UNESCO ಹಂಚಿಕೊಂಡಿರುವ ಟ್ವೀಟ್ ಅನ್ನು ಶೇರ್ ಮಾಡಿರುವ ಪ್ರಧಾನಿ ಮೋದಿ,  'Excellent! Congratulations to everyone, specially the people of Telangana.' ಎಂದು ಬರೆದುಕೊಂಡಿದ್ದಾರೆ. ಅಪ್ರತಿಮ ರಾಮಪ್ಪ ದೇವಾಲಯವು ಮಹಾನ್ ಕಾಕತೀಯ ರಾಜವಂಶದ ಸೊಗಸಾದ ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ. ಈ ಭವ್ಯವಾದ ದೇವಾಲಯ ಸಂಕೀರ್ಣಕ್ಕೆ ಖಂಡಿತವಾಗಿಯೂ ಭೇಟಿ ನೀಡಿ ಅದರ ಭವ್ಯತೆಯನ್ನು ನೀವೇ ಅನುಭವಿಸಬೇಕೆಂದು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


China Interference In Myanmar: ಮ್ಯಾನ್ಮಾರ್ ನಲ್ಲಿ ನುಸುಳುತ್ತಿದೆ ಚೀನಾ, ತೀವ್ರ ನಿಗಾ ವಹಿಸುವ ಅಗತ್ಯ ಎಂದ ಬಿಪಿನ್ ರಾವತ್


ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ? ಇಂದು ಸಂಜೆ ತೀರ್ಮಾನ!


2019ರಲ್ಲಿ UNESCOಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು
ರಾಮಪ್ಪ ದೇವಾಲಯವನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರ ವಾಸ್ತುಶಿಲ್ಪಿ ರಾಮಪ್ಪ ಅವರ ಸ್ಮರಣಾರ್ಥ ಇದಕ್ಕೆ ರಾಮಪ್ಪಾ ದೇಗುಲ ಎಂದು ಹೆಸರಿಸಲಾಗಿದೆ. 2019 ರಲ್ಲಿ ಇದನ್ನು  ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲು ಸರ್ಕಾರ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಿತ್ತು. ಇಂದು ಸುಮಾರು 2 ವರ್ಷಗಳ ಸುದೀರ್ಘ ನಿರೀಕ್ಷೆಯ ಬಳಿಕ ಯುನೆಸ್ಕೋ ಭಾರತದ ಪ್ರಸ್ತಾವನೆಯಿನ್ನು ಒಪ್ಪಿಕೊಂಡಿದೆ ಮತ್ತು ರಾಮಪ್ಪ ದೇವಾಲಯವನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ.


ಇದನ್ನೂ ಓದಿ-ರಾಜ್ಯದಲ್ಲಿ ಭಾರೀ ಮಳೆ : KCET 2021 ಮುಂದೂಡಿ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.