ಅಯೋಧ್ಯೆ: ಬುಲೆಟ್ ಪ್ರೂಫ್ ಫೈಬರ್‌ನಿಂದ ಮಾಡಿದ ಸಣ್ಣ ತಾತ್ಕಾಲಿಕ ರಾಮ್ ದೇವಾಲಯವು ಭಾನುವಾರ (ಮಾರ್ಚ್ 15, 2020) ಅಯೋಧ್ಯೆ(Ayodhya)ಯನ್ನು ತಲುಪಿದೆ. 21 ಅಡಿ ಉದ್ದ ಮತ್ತು 15 ಅಡಿ ಅಗಲದ ದೇವಾಲಯವು ಮಾರ್ಚ್ 24 ರೊಳಗೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಸಿದ್ಧವಾಗಲಿದೆ.


COMMERCIAL BREAK
SCROLL TO CONTINUE READING

1992 ರ ನಂತರ ರಾಮ್‌ಲಾಲ್ಲಾ ಅವರನ್ನು ತಾತ್ಕಾಲಿಕ ಗುಡಾರದಿಂದ ಸರಿಯಾದ ದೇವಾಲಯಕ್ಕೆ ಸ್ಥಳಾಂತರಿಸುವುದು ಇದೇ ಮೊದಲು. ಮಾರ್ಚ್ 25 ರ ಮುಂಜಾನೆ, ರಾಮ್‌ಲಾಲ್ಲಾ ಅವರನ್ನು ಹೊಸ ತಾತ್ಕಾಲಿಕ ದೇವಾಲಯಕ್ಕೆ ಸ್ಥಳಾಂತರಿಸಲಾಗುವುದು.


ಸ್ಥಳಾಂತರದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿರಲಿದ್ದಾರೆ. ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಮತ್ತು ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಇತರ ಟ್ರಸ್ಟಿಗಳು ಸಹ ಈ ಸಮಯದಲ್ಲಿ ಉಪಸ್ಥಿತರಿರಲಿದ್ದಾರೆ.


ಅಯೋಧ್ಯೆಯ ಅನೇಕ ಪುರೋಹಿತರು ಕೂಡ ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.


Ram Mandir)ದಲ್ಲಿ ಭಕ್ತರಿಗೆ ಪ್ರದಕ್ಷಿಣೆ ಹಾಕಲು ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಹ ಚಿಂತಿಸುತ್ತಿದೆ.


ಯೋಗಿ ಆದಿತ್ಯನಾಥ್ ಸರ್ಕಾರವು ರಾಮನ ಭಕ್ತರಿಗಾಗಿ ಎತ್ತರದ ಸೇತುವೆ ರಸ್ತೆಯನ್ನು ನಿರ್ಮಿಸಲಿದ್ದು, ಅದು ನೇರವಾಗಿ ರಾಮಲಾಲಾಗೆ ತಲುಪಲಿದೆ.


ಅಯೋಧ್ಯೆ ಜಿಲ್ಲಾಧಿಕಾರಿ ಅನುಜ್ ಕುಮಾರ್ ಜಾ, "ಎಲ್ಲಾ ಕಾಮಗಾರಿಗಳು ಸಮಯಕ್ಕೆ ಪೂರ್ಣಗೊಳ್ಳಲಿವೆ. ತಾತ್ಕಾಲಿಕ ದೇವಾಲಯದ ನಿರ್ಮಾಣವೂ ಸಮಯಕ್ಕೆ ಸರಿಯಾಗಿ ನಡೆಯಲಿದೆ" ಎಂದು ಹೇಳಿದರು.


ದೇವಾಲಯದಲ್ಲಿ ಅನೇಕ ಸೌಕರ್ಯಗಳಿವೆ. ಬುಲೆಟ್-ಪ್ರೂಫ್, ವಾಟರ್-ಪ್ರೂಫ್ ಮತ್ತು ಫೈರ್-ಪ್ರೂಫ್ ಜೊತೆಗೆ, ಇದು ಕಠಿಣ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲಗಳನ್ನು ಸಹಿಸಿಕೊಳ್ಳಬಲ್ಲದು. ಇದನ್ನು ಶಾಖದಿಂದ ರಕ್ಷಿಸಲು ಎರಡು ಹವಾನಿಯಂತ್ರಣಗಳನ್ನು ಸಹ ಹೊಂದಿದೆ.