ಅಹಮದಾಬಾದ್: ಆಗಸ್ಟ್ 15 ರೊಳಗೆ ಗುಜರಾತ್‌ನಲ್ಲಿ ದೊಡ್ಡ ಭಯೋತ್ಪಾದಕ ದಾಳಿಯ ಸಾಧ್ಯತೆ ಇದೆ ಎನ್ನಲಾಗಿದೆ. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಗುಜರಾತ್‌ನಲ್ಲಿ ದಾಳಿಯ ಬಗ್ಗೆ ಸಂಚು ನಡೆಸಿದೆ ಎಂಬ ಬಗ್ಗೆ ಭದ್ರತಾ ಏಜೆನ್ಸಿಗಳು ಮಾಹಿತಿ ಸಂಗ್ರಹಿಸಿವೆ. ಗುಜರಾತ್‌ನಲ್ಲಿ 2008 ರ ದಾಳಿಯನ್ನು ಭಯೋತ್ಪಾದಕರು ಪುನರಾವರ್ತಿಸಬಹುದು ಎಂದು ಹೇಳಲಾಗುತ್ತಿದೆ. ಭದ್ರತಾ ಸಂಸ್ಥೆಗಳಿಂದ ಈ ಎಚ್ಚರಿಕೆ ಸ್ವೀಕರಿಸಿದ ನಂತರ ಗುಜರಾತ್ ಪೊಲೀಸರು ಜಾಗರೂಕರಾಗಿದ್ದಾರೆ.


COMMERCIAL BREAK
SCROLL TO CONTINUE READING

'ಏಕತಾ ಪ್ರತಿಮೆ' ನಾಶಕ್ಕೆ ಭಯೋತ್ಪಾದಕರ ಸಂಚು: ಐಬಿ ಎಚ್ಚರಿಕೆ
ಫೆಬ್ರವರಿ 12 ರ ಸುದ್ದಿಯ ಪ್ರಕಾರ, ಗುಜರಾತ್‌ನ ನರ್ಮದಾ ನದಿಯ ದಡದಲ್ಲಿರುವ ಏಕತಾ ಪ್ರತಿಮೆ ಬಗ್ಗೆ ಇಂಟಿಲಿಜೆನ್ಸ್ ಬ್ಯೂರೋ (ಐಬಿ) ಎಚ್ಚರಿಕೆ ನೀಡಿತು. ಭಯೋತ್ಪಾದಕರು ಏಕತಾ ಪ್ರತಿಮೆಯನ್ನು ಸ್ಫೋಟಿಸಬಹುದು ಎಂದು ಐಬಿ ಎಚ್ಚರಿಕೆ ನೀಡಿದೆ. ಉಗ್ರರು ತಮ್ಮ ಗುರಿ ಸಾಧಿಸಲು ಅನೇಕ ಬಾಂಬ್ ಸ್ಫೋಟಗಳನ್ನು ನಡೆಸಬಹುದು ಎಂದು ಐಬಿಯ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ಏಕತೆಯ ಪ್ರತಿಮೆಯ ಸುರಕ್ಷತೆಯನ್ನು ಬಿಗಿಗೊಳಿಸಿದೆ. ಈ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.


ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ 2018 ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ 182 ಮೀಟರ್ ಎತ್ತರದ 'ಸ್ಟ್ಯಾಚು ಆಫ್ ಯೂನಿಟಿ' ಅನಾವರಣಗೊಳಿಸಿದರು. ನರ್ಮದಾ ನದಿಯ ಸಾಧು ದ್ವೀಪದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ.