ಪೂಂಚ್; ಉಗ್ರರ ಅಡಗುತಾಣದಲ್ಲಿ 7 IED ವಶಕ್ಕೆ ಪಡೆದ ಸೇನೆ
ಸುರಂಕೋಟೆ ಕಾಡಿನಲ್ಲಿ ಅನುಮಾನಾಸ್ಪದ ಜನರ ಚಲನವಲನ ಕುರಿತು ಗ್ರಾಮಸ್ಥರ ಮಾಹಿತಿಯ ಹಿನ್ನೆಲೆಯಲ್ಲಿ ಭಾನುವಾರ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಪೂಂಚ್: ಜಮ್ಮು ಮತ್ತು ಕಾಶ್ಮೀರದ(Jammu Kashmir) ಪೂಂಚ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮಂಗಳವಾರ ಭಯೋತ್ಪಾದಕ ಅಡಗುತಾಣವನ್ನು ಭೇದಿಸಿ ಸ್ಫೋಟಕ ಸಾಧನಗಳು ಮತ್ತು ವೈರ್‌ಲೆಸ್ ಸೆಟ್ ಅನ್ನು ವಶಪಡಿಸಿಕೊಂಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸುರಂಕೋಟೆ ಕಾಡಿನಲ್ಲಿ ಅನುಮಾನಾಸ್ಪದ ಜನರ ಚಲನವಲನ ಕುರಿತು ಗ್ರಾಮಸ್ಥರ ಮಾಹಿತಿಯ ಹಿನ್ನೆಲೆಯಲ್ಲಿ ಭಾನುವಾರ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದರು. ಧೀರ್ ಕಾಡಿನಲ್ಲಿ ಖಾಲಿ ಇರುವ ಅಡಗುತಾಣದಿಂದ 7 ಐಇಡಿಗಳು, ಗ್ಯಾಸ್ ಸಿಲಿಂಡರ್‌ಗಳು ಮತ್ತು ವೈರ್‌ಲೆಸ್ ಸೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ಈ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು ಇಲ್ಲಿಯವರೆಗೆ ಯಾವುದೇ ಶಂಕಿತ ಭಯೋತ್ಪಾದಕನನ್ನು ಹಿಡಿಯಲಾಗಿಲ್ಲ. ಇನ್ನೂ ಕೂಡ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ, ಜಮ್ಮು-ರಾಜೌರಿ ಹೆದ್ದಾರಿಯಲ್ಲಿ ಭಯೋತ್ಪಾದಕರು ಅಡಗಿಸಿ ಇಟ್ಟಿದ್ದ ಸ್ಫೋಟಕಗಳನ್ನು ನಾಶ ಮಾಡುವ ಮೂಲಕ ಉಗ್ರರ ಪಿತೂರಿಯನ್ನು ಸೇನೆ ತಡೆದಿದೆ. ರಾಜೌರಿ ಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಜಮ್ಮು ಹೆದ್ದಾರಿಯಲ್ಲಿ, 2 ಸ್ಥಳಗಳಲ್ಲಿ ಸ್ಫೋಟಕಗಳನ್ನು ಅಳವಡಿಸಿದ್ದ ಬಗ್ಗೆ ಮಾಹಿತಿ ತಿಳಿದೊಡನೆ ಆರ್ಮಿ ಪೆಟ್ರೋಲಿಂಗ್ ಪಾರ್ಟಿ ಬೆಳಿಗ್ಗೆ 9 ಗಂಟೆಗೆ ರೇಡಿಯೊದ ಚಲನೆಯನ್ನು ನಿಲ್ಲಿಸಿತು ಮತ್ತು ಐಇಡಿಗಳನ್ನು ಹೊರತೆಗೆದು ಆಗಬಹುದಾದ ಬಾರಿ ಅನಾಹುತವನ್ನು ತಪ್ಪಿಸಿದೆ.